ಪ್ರೇಮಿಗಳಾದ ಕ್ರಿಕೆಟಿಗ ವಿರಾಟ್ ಕೊಹ್ಲಿ , ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನ್ಯೂ ಇಯರ್ ಪಾರ್ಟಿಯನ್ನು ಭಾರತದಲ್ಲೇ ಆಚರಿಸಲಿದ್ದಾರೆಂದು ಮೂಲಗಳು ಹೇಳಿವೆ.

ಡೆಹ್ರಾಡೂನ್‌'ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದಲ್ಲಿ ಈ ಇಬ್ಬರೂ ಶನಿವಾರ ಒಟ್ಟಿಗೇ ಕಾಣಿಸಿಕೊಂಡಿರುವ ಫೋಟೋಗಳು ಕೆಲ ಅಂತರ್ಜಾಲ ಮಾಧ್ಯಮಗಳಲ್ಲಿ ಹರಿದಾಡಿವೆ.

ಅಲ್ಲಿಂದ ಈ ಇಬ್ಬರೂ ಉತ್ತರಾಖಾಂಡ್‌'ನಲ್ಲಿರುವ ನರೇಂದ್ರ ನಗರ್‌'ನಲ್ಲಿನ ಆನಂದ ರೆಸಾರ್ಟ್‌ಗೆ ತೆರಳಿದ್ದು ಅಲ್ಲಿಯೇ ನ್ಯೂ ಇಯರ್ ಪಾರ್ಟಿಯಲ್ಲಿ ಪಾಲ್ಗೊಳ್ಳಲಿದ್ದಾರೆನ್ನಲಾಗಿದೆ.

ಒಟ್ಟಾರೆ ಆಂಗ್ಲರ ವಿರುದ್ಧ ಟೆಸ್ಟ್ ಸರಣಿ ಗೆದ್ದ ನಂತರ ನಾಯಕ ವಿರಾಟ್ ಕೊಹ್ಲಿ ಇದೀಗ ಫುಲ್ ಜಾಲಿಮೂಡ್'ನಲ್ಲಿದ್ದಂತೆ ಕಾಣುತ್ತಿದೆ.