ಈಕ್ವೆಸ್ಟ್ರಿಯನ್‌ನಲ್ಲಿ ಭಾರತದ ಅನುಶ್‌ಗೆ ಪ್ಯಾರಿಸ್ ಒಲಿಂಪಿಕ್ಸ್‌ ಟಿಕೆಟ್‌ ಕನ್ಫರ್ಮ್

ಕಳೆದ ವರ್ಷ ಏಷ್ಯಾಡ್‌ನಲ್ಲಿ ಐತಿಹಾಸಿಕ ಕಂಚು ಜಯಿಸಿದ್ದ 24ರ ಅನುಶ್‌, 4 ಅಂತಾರಾಷ್ಟ್ರೀಯ ಈಕ್ವೆಸ್ಟ್ರಿಯನ್‌ ಕೂಟಗಳ ಮೂಲಕ ಒಲಿಂಪಿಕ್ಸ್‌ ಅರ್ಹತೆ ಪಡೆದುಕೊಂಡಿದ್ದಾರೆ. ಅನೀಶ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ 8ನೇ ಈಕ್ವೆಸ್ಟ್ರಿಯನ್‌ ಪಟು.

Anush Agarwalla fetches India Paris Olympics quota in equestrian kvn

ನವದೆಹಲಿ(ಫೆ.21): ಏಷ್ಯನ್‌ ಗೇಮ್ಸ್‌ ಪದಕ ವಿಜೇತ ಭಾರತದ ಅನುಶ್‌ ಅಗರ್‌ವಾಲ್‌ ಈಕ್ವೆಸ್ಟ್ರಿಯನ್‌(ಕುದುರೆ ರೇಸ್‌)ನಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಈ ಬಗ್ಗೆ ಸೋಮವಾರ ಭಾರತೀಯ ಈಕ್ವೆಸ್ಟ್ರಿಯನ್‌ ಫೆಡರೇಶನ್‌ ಮಾಹಿತಿ ನೀಡಿದ್ದು, ಅನುಶ್‌ ಡ್ರೆಸ್ಸೇಜ್‌ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದಿದೆ.

ಕಳೆದ ವರ್ಷ ಏಷ್ಯಾಡ್‌ನಲ್ಲಿ ಐತಿಹಾಸಿಕ ಕಂಚು ಜಯಿಸಿದ್ದ 24ರ ಅನುಶ್‌, 4 ಅಂತಾರಾಷ್ಟ್ರೀಯ ಈಕ್ವೆಸ್ಟ್ರಿಯನ್‌ ಕೂಟಗಳ ಮೂಲಕ ಒಲಿಂಪಿಕ್ಸ್‌ ಅರ್ಹತೆ ಪಡೆದುಕೊಂಡಿದ್ದಾರೆ. ಅನೀಶ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ 8ನೇ ಈಕ್ವೆಸ್ಟ್ರಿಯನ್‌ ಪಟು. ಈ ಮೊದಲು ದಾರ್ಯಾ ಸಿಂಗ್‌, ಜೀತೆಂದ್ರಜಿತ್‌ ಸಿಂಗ್‌, ಹುಸೈನ್‌ ಸಿಂಗ್‌, ಮೊಹಮದ್‌ ಖಾನ್‌(1980-ಮಾಸ್ಕೋ), ಇಂದ್ರಜಿತ್‌ ಲಂಬಾ(1996-ಅಟ್ಲಾಂಟಾ), ಇಂತಿಯಾಜ್‌ ಅನೀಸ್‌(2000-ಸಿಡ್ನಿ) ಹಾಗೂ ಫೌಆದ್‌ ಮಿರ್ಜಾ(2022-ಟೋಕಿಯೋ) ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ವಿಶ್ವ ರ್‍ಯಾಂಕಿಂಗ್‌: 136 ಸ್ಥಾನ ಜಿಗಿದ ಭಾರತದ ಯುವ ಶಟ್ಲರ್‌ ಅನ್ಮೋಲ್‌!

ನವದೆಹಲಿ: ಬ್ಯಾಡ್ಮಿಂಟನ್‌ ಏಷ್ಯಾ ಟೀಂ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ತಮ್ಮ ಆಟದ ಮೂಲಕ ಬ್ಯಾಡ್ಮಿಂಟನ್‌ ಜಗತ್ತನ್ನು ನಿಬ್ಬೆರಗಾಗಿಸಿದ್ದ 17 ವರ್ಷದ ಅನ್ಮೋಲ್‌ ಖರ್ಬ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ ಬರೋಬ್ಬರಿ 136 ಸ್ಥಾನ ಮೇಲಕ್ಕೇರಿದ್ದಾರೆ. 

ದೆಹಲಿ ಫುಟ್ಬಾಲ್‌ ಲೀಗ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌?: ತನಿಖೆ ಆರಂಭ

ಮಂಗಳವಾರ ಪ್ರಕಟಗೊಂಡ ಮಹಿಳಾ ಸಿಂಗಲ್ಸ್‌ನ ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅನ್ಮೋಲ್‌ 336ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಪಿ.ವಿ.ಸಿಂಧು 11ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌.ಪ್ರಣಯ್‌ 7ನೇ ಸ್ಥಾನದಲ್ಲಿ ಮುಂದುವರಿದಿದ್ದು, ಲಕ್ಷ್ಯ ಸೇನ್‌ 19, ಕಿದಂಬಿ ಶ್ರೀಕಾಂತ್‌ 24ನೇ ಸ್ಥಾನಗಳಲ್ಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.

ಮುಂಬಾ- ಟೈಟಾನ್ಸ್‌ ಟೈ

ಪಂಚಕುಲ: ಪ್ರೊ ಕಬಡ್ಡಿ 10ನೇ ಆವೃತ್ತಿಯ ತೆಲುಗು ಟೈಟಾನ್ಸ್‌ ಹಾಗೂ ಯು ಮುಂಬಾ ನಡುವಿನ ಪಂದ್ಯ 45-45 ಅಂಕಗಳಿಂದ ಟೈ ಆಯಿತು. ಇದರೊಂದಿಗೆ ಮುಂಬಾ ಅಂಕಪಟ್ಟಿಯಲ್ಲಿ 10ನೇ, ಟೈಟಾನ್ಸ್‌ 12ನೇ ಸ್ಥಾನಿಯಾಗಿ ಟೂರ್ನಿಯಲ್ಲಿ ಅಭಿಯಾನ ಕೊನೆಗೊಳಿಸಿತು.

7 ವರ್ಷದ ಬಳಿಕ ವಿಶ್ವ ಕುಸ್ತಿಗೆ ಮರಳಿದ ನಟ ಸಂಗ್ರಾಮ್ ಸಿಂಗ್, ಫೆ.24ಕ್ಕೆ ಪಾಕಿಸ್ತಾನ ಪಟು ಜೊತೆ ಕಾದಾಟ!

ಪ್ರೊ ಲೀಗ್‌ ಹಾಕಿ: ಇಂದು ಭಾರತ vs ನೆದರ್‌ಲೆಂಡ್ಸ್‌

ರೂರ್ಕೆಲಾ: ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಪಂದ್ಯಾವಳಿಯಲ್ಲಿ ಭಾರತ ಪುರುಷರ ತಂಡ ತನ್ನ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದ್ದು, ಬುಧವಾರ ನೆದರ್‌ಲೆಂಡ್ಸ್‌ ವಿರುದ್ಧ ಮುಖಾಮುಖಿಯಾಗಲಿದೆ. ಹರ್ಮನ್‌ಪ್ರೀತ್‌ ಸಿಂಗ್‌ ನೇತೃತ್ವದ ಭಾರತ ಪಡೆ ಹಿಂದಿನ ಪಂದ್ಯಗಳಲ್ಲಿ ಐರ್ಲೆಂಡ್‌ ಹಾಗೂ ಸ್ಪೇನ್‌ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದಿತ್ತು. ಟೂರ್ನಿಯಲ್ಲಿ ಆಡಿದ 5 ಪಂದ್ಯಗಳಲ್ಲಿ 4ರಲ್ಲಿ ಜಯ, 1ರಲ್ಲಿ ಸೋಲು ಕಂಡಿರುವ ಭಾರತ 10 ಅಂಕದೊಂದಿಗೆ 4ನೇ ಸ್ಥಾನದಲ್ಲಿದೆ. 18 ಅಂಕಗಳೊಂದಿಗೆ ನೆದರ್‌ಲೆಂಡ್ಸ್‌ ಅಗ್ರಸ್ಥಾನದಲ್ಲಿದೆ.

ಮಾ.20ಕ್ಕೆ ಬೆಂಗಳೂರಲ್ಲಿ ರಾಷ್ಟ್ರೀಯ ಜಂಪ್ಸ್‌ ಕೂಟ

ಬೆಂಗಳೂರು: ರಾಷ್ಟ್ರೀಯ 3ನೇ ಜಂಪ್ಸ್‌ ಕೂಟವು ಬೆಂಗಳೂರಿನ ಕುಂಬಳಗೋಡುನಲ್ಲಿರುವ ಅಂಜು ಬಾಬಿ ಹೈ ಪರ್ಪಾಮೆನ್ಸ್‌ ಕೇಂದ್ರದಲ್ಲಿ ಮಾ.20ರಂದು ಆಯೋಜಿಸಲಾಗಿದೆ. ಭಾರತೀಯ ಅಥ್ಲೆಟಿಕ್ಸ್‌ ನಿಯಮಗಳ ಪ್ರಕಾರ ಉದ್ದ ಜಿಗಿತ, ಎತ್ತರ ಜಿಗಿತ, ಟ್ರಿಪಲ್‌ ಜಂಪ್‌ ಹಾಗೂ ಪೋಲ್‌ವಾಲ್ಟ್‌ ಸ್ಫರ್ಧೆಗಳು ಜರುಗಲಿವೆ. 1 ಸಾವಿರ ರು. ಪ್ರವೇಶ ಶುಲ್ಕ ಪಾವತಿಸಿ ಆನ್‌ಲೈನ್‌ ಮೂಲಕ ಮಾ.10ರೊಳಗಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

Latest Videos
Follow Us:
Download App:
  • android
  • ios