ಲೀಗ್‌ನ ರೇಂಜರ್ಸ್‌ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಅಹ್ಹಾಬ್‌ ಎಫ್‌ಸಿ ತಂಡದಿಂದ 2 ಸ್ವಂತ ಗೋಲು ದಾಖಲಾಗಿದೆ. ಆದರೆ ಈ ಗೋಲುಗಳು ಉದ್ದೇಶಪೂರ್ವಕ ಎಂಬಂತಿದ್ದು, ವಿಡಿಯೋ ಕೂಡಾ ವೈರಲ್‌ ಆಗಿದೆ.

ನವದೆಹಲಿ: ಡೆಲ್ಲಿ ಪ್ರೀಮಿಯರ್‌ ಲೀಗ್‌ ಫುಟ್ಬಾಲ್‌ ಟೂರ್ನಿಯಲ್ಲಿ ಮ್ಯಾಕ್‌ ಫಿಕ್ಸಿಂಗ್‌ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಭಾರತೀಯ ಫುಟ್ಬಾಲ್‌ ಫೆಡರೇಷನ್‌(ಎಐಎಫ್‌ಎಫ್‌) ತನಿಖೆ ಆರಂಭಿಸಿದೆ. 

ಲೀಗ್‌ನ ರೇಂಜರ್ಸ್‌ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಅಹ್ಹಾಬ್‌ ಎಫ್‌ಸಿ ತಂಡದಿಂದ 2 ಸ್ವಂತ ಗೋಲು ದಾಖಲಾಗಿದೆ. ಆದರೆ ಈ ಗೋಲುಗಳು ಉದ್ದೇಶಪೂರ್ವಕ ಎಂಬಂತಿದ್ದು, ವಿಡಿಯೋ ಕೂಡಾ ವೈರಲ್‌ ಆಗಿದೆ. ವಿಡಿಯೋ ವೀಕ್ಷಿಸಿತ ಬಹುತೇಕ ಮಂದಿ ಮ್ಯಾಚ್‌ ಫಿಕ್ಸಿಂಗ್‌ ಆರೋಪ ಹೊರಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸುತ್ತಿರುವ ಎಐಎಫ್‌ಎಫ್‌, ಡೆಲ್ಲಿ ಫುಟ್ಬಾಲ್‌ ಸಂಸ್ಥೆ ಮುಖ್ಯಸ್ಥ ಅನುಗ್‌ ಗುಪ್ತಾಗೆ ವಿಚಾರಣೆಗೆ ಆಗಮಿಸುವಂತೆ ಸೂಚಿಸಿದೆ.

Scroll to load tweet…

ಇಂದಿನಿಂದ ಸಂತೋಷ್‌ ಟ್ರೋಫಿ ಫೈನಲ್‌ ಸುತ್ತು

ಯೂಪಿಯಾ(ಅರುಣಾಚಲ ಪ್ರದೇಶ): 77ನೇ ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿಯ ಫೈನಲ್‌ ಸುತ್ತಿನ ಪಂದ್ಯಗಳು ಬುಧವಾರದಿಂದ ಆರಂಭಗೊಳ್ಳಲಿದೆ. 12 ತಂಡಗಳ ನಡುವಿನ ಅಂತಿಮ ಸುತ್ತಿನ ಹಣಾಹಣಿಗೆ ಅರುಣಾಚಲ ಪ್ರದೇಶ ಆತಿಥ್ಯ ವಹಿಸಲಿದ್ದು, ಆರಂಭಿಕ ಪಂದ್ಯದಲ್ಲಿ ಮೇಘಾಲಯ-ಸರ್ವಿಸಸ್‌ ತಂಡಗಳು ಮುಖಾಮುಖಿಯಾಗಲಿವೆ.

ಸಚಿನ್‌ ತೆಂಡುಲ್ಕರ್ ಬಳಿಕ ವಿರಾಟ್‌ ಕೊಹ್ಲಿಗೂ ತಟ್ಟಿದ ಡೀಪ್‌ ಫೇಕ್‌ ಬಿಸಿ! ಆ ವಿಡಿಯೋ ಅವರದ್ದಲ್ಲ..!

ಹಾಲಿ ಚಾಂಪಿಯನ್‌ ಕರ್ನಾಟಕ ತಂಡ ‘ಬಿ’ ಗುಂಪಿನಲ್ಲಿದ್ದು, ಫೆ.22ರಂದು ದೆಹಲಿ ವಿರುದ್ಧ ಮೊದಲ ಪಂದ್ಯವಾಡಲಿದೆ. ಬಳಿಕ ಫೆ.24ಕ್ಕೆ ಮಿಜೋರಾಂ, ಫೆ.26ಕ್ಕೆ ಮಣಿಪುರ, ಫೆ.29ಕ್ಕೆ ರೈಲ್ವೇಸ್‌ ಹಾಗೂ ಕೊನೆ ಪಂದ್ಯದಲ್ಲಿ ಮಾ.2ಕ್ಕೆ ಮಹಾರಾಷ್ಟ್ರ ವಿರುದ್ಧ ಸೆಣಸಾಡಲಿದೆ.

ವಿಶ್ವ ಟಿಟಿ ಚಾಂಪಿಯನ್‌ಶಿಪ್‌: ಭಾರತ ತಂಡಗಳು ನಾಕೌಟ್‌ಗೆ

ಬುಸಾನ್‌(ದಕ್ಷಿಣ ಕೊರಿಯಾ): ವಿಶ್ವ ಟೇಬಲ್‌ ಟೆನಿಸ್‌ ಟೀಂ ಚಾಂಪಿಯನ್‌ಶಿಪ್‌ನ ಗುಂಪು ಹಂತದ ಕೊನೆ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ನಾಕೌಟ್‌ ಪ್ರವೇಶಿಸಿವೆ.

ಮಹಿಳಾ ತಂಡ ಸ್ಪೇನ್‌ ವಿರುದ್ಧ 3-2ರಲ್ಲಿ ಜಯ ದಾಖಲಿಸಿದರೆ, ಪುರುಷರ ತಂಡ ನ್ಯೂಜಿಲೆಂಡ್‌ ವಿರುದ್ಧ 3-0 ರಂತರದಲ್ಲಿ ಗೆದ್ದು ಬೀಗಿತು. ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರೆ ಇತ್ತಂಡಗಳು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿವೆ.

ವಿರುಷ್ಕಾ ದಂಪತಿ 2ನೇ ಮಗುವಿಗೆ ಅಕಾಯ್ ನಾಮಕರಣ,ಈ ಹೆಸರಿನ ಅರ್ಥವೇನು?

ಮಹಿಳೆಯರ ವಿಭಾಗದಲ್ಲಿ ಮೊದಲ ಸಿಂಗಲ್ಸ್‌ನಲ್ಲಿ ಶ್ರೀಜಾ ಅಕುಲ್‌, ಮಣಿಕಾ ಬಾತ್ರಾ ಪರಾಭವಗೊಂಡರು. 3ನೇ ಸಿಂಗಲ್ಸ್‌ನಲ್ಲಿ ಐಹಿಕಾ ಮುಖರ್ಜಿ ಜಯ ಸಾಧಿಸುವ ಮೂಲಕ ಭಾರತ ಗೆಲುವಿನ ಆಸೆಯನ್ನು ಜೀವತವಾಗಿರಿಸಿದರು. 4 ಮತ್ತು 5ನೇ ಸಿಂಗಲ್ಸ್‌ನಲ್ಲಿ ಗೆದ್ದ ಮಣಿಕಾ ಮತ್ತು ಶ್ರೀಜಾ ಭಾರತವನ್ನು ಅಂತಿಮ 24ರ ಘಟ್ಟಕ್ಕೇರಿಸಿದರು.

ಇನ್ನು ಪುರುಷರ ತಂಡದಲ್ಲಿದ್ದ ರಾಷ್ಟ್ರೀಯ ಚಾಂಪಿಯನ್‌ ಹರ್ಮೀತ್‌ ದೇಸಾಯಿ, ನ್ಯೂಜಿಲೆಂಡ್‌ನ ಚೋಯಿ ಟಿಮೋಥಿ ವಿರುದ್ಧ ಗೆದ್ದರೆ, ಜಿ.ಸತ್ಯನ್‌ ಅವರು ಆಲ್ಫ್ರೆಡ್‌ ಡೆಲಾ ವಿರುದ್ಧ, ಮಾನುಶ್‌ ಶಾ ಅವರು ಮಾಕ್ಸ್‌ವೆಲ್‌ ಹೆಂಡರ್‌ಸನ್ ವಿರುದ್ಧ ಗೆಲುವು ಸಾಧಿಸಿದರು.