ಮ್ಯೂನಿಕ್: ಭಾರತದ ಅಂಜುಮ್ ಮೌದ್ಗಿಲ್ ಇಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್‌ನ ಮಹಿಳೆಯರ ರೈಫಲ್ 3 ಪೊಸಿಷನ್ ಫೈನಲ್‌ನಲ್ಲಿ 6ನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದರು. 45 ಶಾಟ್ ಫೈನಲ್‌ನಲ್ಲಿ 40ನೇ ಶಾಟ್ ವರೆಗೂ ಪದಕ ಪೈಪೋಟಿಯಲ್ಲಿದ್ದ ಅಂಜುಮ್ 41ನೇ ಪ್ರಯತ್ನದಲ್ಲಿ 9.2 ಅಂಕ ಪಡೆದು, 6ನೇ ಸ್ಥಾನದಲ್ಲಿ ಉಳಿಯಬೇಕಾಯಿತು.

ಮಹಿಳೆಯರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಹೀನಾ ಸಿಧು 17, ಮಹಿಮಾ ಅಗರ್‌ವಾಲ್ 36 ಹಾಗೂ ಮನು ಭಾಕರ್ 47ನೇ ಸ್ಥಾನದೊಂದಿಗೆ ನಿರಾಸೆ ಮೂಡಿಸಿದರು. ಇನ್ನು ಪುರುಷರ ರ‍್ಯಾಪಿಡ್ ಫೈಯರ್ ಪಿಸ್ತೂಲ್ ವಿಭಾಗದಲ್ಲಿ ಗುರ್‌ಪ್ರೀತ್ ಹಾಗೂ ಅನೀಶ್ ಭನವಾಲಾ ಫೈನಲ್ ಪ್ರವೇಶಿಸುವಲ್ಲಿ ವಿಫಲರಾದರು.