ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಅನಿಲ್ ಕುಂಬ್ಳೆ ಹಾಗೂ ನಾಯಕ ವಿರಾಟ್ ಕೊಹ್ಲಿ ನಡುವೆ ಮನಸ್ತಾಪ ಉಂಟಾದ ವಿಷಯ ಜಗಜ್ಜಾಹಿರುಗೊಂಡಿತ್ತು.
ಮುಂಬೈ (ಡಿ.28): ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಅನಿಲ್ ಕುಂಬ್ಳೆ ಹಾಗೂ ನಾಯಕ ವಿರಾಟ್ ಕೊಹ್ಲಿ ನಡುವೆ ಮನಸ್ತಾಪ ಉಂಟಾದ ವಿಷಯ ಜಗಜ್ಜಾಹಿರುಗೊಂಡಿತ್ತು.
ಈ ವಿಷಯವನ್ನು ಕುಂಬ್ಳೆ ಸಹ ಬಹಿರಂಗಗೊಳಿಸಿದ್ದರು. ಇದೇ ಕಾರಣದಿಂದ ಕೋಚ್ ಹುದ್ದೆ ಸಹ ತೊರೆದಿದ್ದರು. ಇಬ್ಬರ ನಡುವೆ ಕಂದಕ ಉಂಟಾಗಿತ್ತು. ಇದನ್ನೆಲ್ಲಾ ಬದಿಗೊತ್ತಿ ವಿರಾಟ್ ಕೊಹ್ಲಿ, ಮಂಗಳವಾರ ಮುಂಬೈನಲ್ಲಿ ನಡೆದ ತಮ್ಮ ಮದುವೆ ಆರತಕ್ಷತೆ ಸಮಾರಂಭಕ್ಕೆ ಕುಂಬ್ಳೆಗೆ ಆಹ್ವಾನ ನೀಡಿದ್ದರು. ಈ ಆಹ್ವಾನವನ್ನು ಮನ್ನಿಸಿದ ಕುಂಬ್ಳೆ, ಪತ್ನಿ ಚೇತನಾ ಸಮೇತ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ವಿರಾಟ್- ಅನುಷ್ಕಾ ಶರ್ಮಾ ಜೋಡಿಗೆ ಶುಭ ಕೋರುವ ಮೂಲಕ ಅಚ್ಚರಿಗೆ ಕಾರಣರಾದರು.
