ದೆಹಲಿ ಮೈದಾನದಲ್ಲಿ ಕೇವಲ 74 ರನ್ ನೀಡಿ ಪಾಕ್'ನ 10 ವಿಕೆಟ್ ಪಡೆಯುವಲ್ಲಿ ಗೂಗ್ಲಿ ಸ್ಪೆಷಲಿಸ್ಟ್ ಯಶಸ್ವಿಯಾದರು..

ಇಂದಿಗೆ ಸರಿಸುಮಾರು 18 ವರ್ಷಗಳ ಹಿಂದೆ ಭಾರತದ ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ದಾಖಲೆಯೊಂದು ನಿರ್ಮಾಣವಾಯ್ತು. ಫಿರೋಜ್ ಷಾ ಕೋಟ್ಲಾದಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ದಾಳಿಗೆ ಪಾಕಿಸ್ತಾನದ ಬ್ಯಾಟ್ಸ್'ಮನ್'ಗಳು ತರಗೆಲೆಗಳಂತೆ ಉರುಳಿಹೋದರು.ಇದೆಲ್ಲಾ ನಡೆದದ್ದು ಫೆಬ್ರವರಿ 7, 1999ರಲ್ಲಿ.

ಒಂದು ಹಂತದಲ್ಲಿ ಭಾರತ ನೀಡಿದ್ದ 420 ರನ್'ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ಉತ್ತಮ ಆರಂಭವನ್ನೇ ಪಡೆದಿತ್ತು.. ಆದರೆ ಕುಂಬ್ಳೆ ಕೈ ಚಳಕಕ್ಕೆ ಹೊಸತೊಂದು ಇತಿಹಾಸವೇ ನಿರ್ಮಾಣವಾಯ್ತು.. ದೆಹಲಿ ಮೈದಾನದಲ್ಲಿ ಕೇವಲ 74 ರನ್ ನೀಡಿ ಪಾಕ್'ನ 10 ವಿಕೆಟ್ ಪಡೆಯುವಲ್ಲಿ ಗೂಗ್ಲಿ ಸ್ಪೆಷಲಿಸ್ಟ್ ಯಶಸ್ವಿಯಾದರು..

ಈ ಮೊದಲು 1956ರಲ್ಲಿ ಇಂಗ್ಲೆಂಡ್'ನ ಜಿಮ್ ಲೇಕರ್ ಆಸ್ಟ್ರೇಲಿಯಾ ವಿರುದ್ಧ ಒಂದೇ ಇನಿಂಗ್ಸ್'ನಲ್ಲಿ ಎಲ್ಲಾ 10 ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.