Asianet Suvarna News Asianet Suvarna News

ಎ ದರ್ಜೆ ಆಟಗಾರರ ವೇತನ 150% ಹೆಚ್ಚಿಸಿ: ಕುಂಬ್ಳೆ

ಅನಿಲ್ ಕುಂಬ್ಳೆ ಕೋಚ್ ಹುದ್ದೆಯ ಅವಧಿಯು ಚಾಂಪಿಯನ್ಸ್ ಟ್ರೋಫಿ ಬಳಿಕ ಕೊನೆಯಾಗಲಿದ್ದು, ವೆಸ್ಟ್'ಇಂಡಿಸ್ ಪ್ರವಾಸದವರೆಗೂ ಕೋಚ್ ಹುದ್ದೆಯಲ್ಲೇ ಮುಂದುವರೆಯುವ ಇರಾದೆ ಹೊಂದಿದ್ದಾರೆ ಎನ್ನಲಾಗುತ್ತಿದೆ.

Anil Kumble Proposes 150 Per Cent Hike For Grade A Players
  • Facebook
  • Twitter
  • Whatsapp

ನವದೆಹಲಿ(ಮೇ.21): ಭಾರತ ಕ್ರಿಕೆಟ್ ತಂಡದ ಪ್ರಧಾನ ತರಬೇತುದಾರ ಅನಿಲ್ ಕುಂಬ್ಳೆ ಹಾಗೂ ತಂಡದ ನಾಯಕ ವಿರಾಟ್ ಕೊಹ್ಲಿ, ‘ಎ’ ದರ್ಜೆ ಆಟಗಾರರ ವೇತನವನ್ನು ಶೇಖಡ 150ರಷ್ಟು ಹೆಚ್ಚಳ ಮಾಡಬೇಕೆಂಬ ಪ್ರಸ್ತಾಪ ಸಲ್ಲಿಸಿದ್ದಾರೆ.

ಇಂದು ಹೈದರಾಬಾದ್‌ನಲ್ಲಿ ಬಿಸಿಸಿಐ ಸಿಇಓ ರಾಹುಲ್ ಜೋಹ್ರಿ ಹಾಗೂ ಜಂಟಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಸಮ್ಮುಖದಲ್ಲಿ ಕುಂಬ್ಳೆ, ಸರ್ವೋಚ್ಚ ನ್ಯಾಯಾಲಯ ನೇಮಿತ ಬಿಸಿಸಿಐ ಆಡಳಿತ ಸಮಿತಿ ಮುಂದೆ ವರದಿ ನೀಡಿದರು.

ಈ ಮಾತುಕತೆ ವೇಳೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಕೈಪ್ ಮೂಲಕ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಇದೇವೇಳೆ ಕುಂಬ್ಳೆ ಹಾಗೂ ಕೊಹ್ಲಿ ಟೆಸ್ಟ್ ತಂಡವನ್ನು ಪ್ರತಿನಿಧಿಸುವ ಆಟಗಾರರಿಗೆ ಹೆಚ್ಚಿನ ವೇತನ ನೀಡಬೇಕೆಂದು ಒತ್ತಾಯಿಸಿದ್ದಾರೆ. ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಅವರನ್ನು ಐಪಿಎಲ್'ನಲ್ಲಿ ಯಾವೊಬ್ಬ ಪ್ರಾಂಚೈಸಿಯೂ ಖರೀಧಿಸಿಲ್ಲ. ಆದರೆ ಕೇವಲ ರಣಜಿ ಪಂದ್ಯವನ್ನಾಡಿದ ಪವನ್ ನೇಗಿ ಕೇವಲ 45 ದಿನದ ಟೂರ್ನಿಯಲ್ಲಿ 8.5 ಕೋಟಿ ಬಾಚಿಕೊಳ್ಳುತ್ತಾರೆ. ಹಾಗಾಗಿ ಟೆಸ್ಟ್ ಕ್ರಿಕೆಟ್ ಆಟಗಾರರ ಬಗ್ಗೆ ಬಿಸಿಸಿಐ ಗಮನಹರಿಸಬೇಕು ಎಂದಿದ್ದಾರೆಂದು ಬಿಸಿಸಿಐ ಉನ್ನತ ಮೂಲಗಳು ತಿಳಿಸಿವೆ.

ಪ್ರಸ್ತುತ ಎ ದರ್ಜೆ ಆಟಗಾರರಿಗೆ ವರ್ಷಕ್ಕೆ ₹ 2 ಕೋಟಿ, ಬಿ ದರ್ಜೆ ಆಟಗಾರರಿಗೆ ₹ 1 ಕೋಟಿ ಹಾಗೂ ಸಿ ದರ್ಜೆ ಆಟಗಾರರಿಗೆ ₹ 50 ಲಕ್ಷ ರೂಪಾಯಿ ವೇತನ ನೀಡಲಾಗುತ್ತಿದೆ. ‘ಎ’ ದರ್ಜೆ ಆಟಗಾರರು ಸಾಮಾನ್ಯವಾಗಿ ಎಲ್ಲಾ ಮಾದರಿಯಲ್ಲೂ ತಂಡವನ್ನು ಪ್ರತಿನಿಧಿಸಲಿದ್ದಾರೆ. ಹೀಗಾಗಿ ಅವರ ವೇತನವನ್ನು ಹೆಚ್ಚಿಸಬೇಕು ಎಂದು ಕುಂಬ್ಳೆ ಹಾಗೂ ಕೊಹ್ಲಿ ಕೇಳಿಕೊಂಡರು. ಒಂದೊಮ್ಮೆ ಹೊಸ ಪ್ರಸ್ತಾಪಕ್ಕೆ ಆಡಳಿತ ಸಮಿತಿ ಒಪ್ಪಿಗೆ ಸೂಚಿಸಿದರೆ, ‘ಎ’ ದರ್ಜೆ ಆಟಗಾರರಿಗೆ ವಾರ್ಷಿಕ ₹5 ಕೋಟಿ ಸಂಭಾವನೆ ಸಿಗಲಿದೆ.

ಅನಿಲ್ ಕುಂಬ್ಳೆ ಕೋಚ್ ಹುದ್ದೆಯ ಅವಧಿಯು ಚಾಂಪಿಯನ್ಸ್ ಟ್ರೋಫಿ ಬಳಿಕ ಕೊನೆಯಾಗಲಿದ್ದು, ವೆಸ್ಟ್'ಇಂಡಿಸ್ ಪ್ರವಾಸದವರೆಗೂ ಕೋಚ್ ಹುದ್ದೆಯಲ್ಲೇ ಮುಂದುವರೆಯುವ ಇರಾದೆ ಹೊಂದಿದ್ದಾರೆ ಎನ್ನಲಾಗುತ್ತಿದೆ.

Follow Us:
Download App:
  • android
  • ios