ಕಾನ್ಪರ(ಸೆ.26): ಕಾನ್ಪುರದಲ್ಲಿ ಐತಿಹಾಸಿಕ 500ನೇ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಮಾಜಿ ನಾಯಕರನ್ನು ಸನ್ಮಾನಿಸಲಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟೀಂ ಇಂಡಿಯಾದ ನಾಯಕನಾಗಿ ಕಾರ್ಯ ನಿರ್ವಹಿಸಿದ್ದ ಕನ್ನಡಿಗ ಅನಿಲ್ ಕುಂಬ್ಳೆಯವರನ್ನೂ ಸನ್ಮಾಯಿಸಲಾಯಿತು. ಅದೇ ಸಮಾರಂಭಲ್ಲಿ ಕೋಚ್ ಅನಿಲ್ ಕುಂಬ್ಳೆ ಅವರ ಕನ್ನಡಕ ಹಾಗೂ ಟೋಪಿ ಕಳುವಾಗಿತ್ತೆಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ!

ಸನ್ಮಾನಗೊಳ್ಳುವವರಿಗಾಗಿ ಮೀಸಲಿರಿಸಿದ್ದ ಆಸನಗಳಲ್ಲಿ ಕುಳಿತಿದ್ದ ಕುಂಬ್ಳೆ, ತಮ್ಮ ಹೆಸರು ಕರೆದಾಗ ತಮ್ಮ ಕನ್ನಡಕ, ಟೋಪಿಯನ್ನು ಕುರ್ಚಿಯ ಮೇಲೆ ಬಿಟ್ಟು ವೇದಿಕೆಯೇರಿದ್ದರು. ಆದರೆ, ಸನ್ಮಾನ ಸ್ವೀಕರಿಸಿ ಹಿಂದಿರುಗಿ ಬರುವಷ್ಟರಲ್ಲಿ ಅವು ಮಂಗಮಾಯವಾಗಿದ್ದನ್ನು ಕಂಡು ಕುಂಬ್ಳೆ ಕಕ್ಕಾಬಿಕ್ಕಿಯಾದರಂತೆ!