ಟೀಂ ಇಂಡಿಯಾವು ಸ್ಥಿರ ಆರಂಭಿಕ ಆಟಗಾರರಿಲ್ಲದಿದ್ದರೂ ಉತ್ತಮ ಪ್ರದರ್ಶನ ತೋರುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಕುಂಬ್ಳೆ ಹೇಳಿದ್ದಾರೆ.

ಮುಂಬೈ(ಡಿ.06): ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರದಿಂದ ಆರಂಭವಾಗುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಂಬ್ಳೆ, ‘‘ಇಂಗ್ಲೆಂಡ್ ವಿರುದ್ಧ ಸ್ಥಿರ ಪ್ರದರ್ಶನ ತೋರಲು ಮುರಳಿ ವಿಫಲವಾದರೂ, ರಾಜ್‌ಕೋಟ್ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದಾರೆ. ಈ ಸರಣಿಗೂ ಮುಂಚಿನ ಪಂದ್ಯಗಳಲ್ಲಿ ಮುರಳಿ ಸಾಧನೆ ಕಮ್ಮಿಯಿಲ್ಲ ಎಂಬುದನ್ನು ಮರೆಯಬಾರದು’’ ಎಂದರು.

ಟೀಂ ಇಂಡಿಯಾವು ಸ್ಥಿರ ಆರಂಭಿಕ ಆಟಗಾರರಿಲ್ಲದಿದ್ದರೂ ಉತ್ತಮ ಪ್ರದರ್ಶನ ತೋರುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಕುಂಬ್ಳೆ ಹೇಳಿದ್ದಾರೆ. ಇದೇವೇಳೆ ಕನ್ನಡಿಗ ಕೆ.ಎಲ್ ರಾಹುಲ್ ಕೂಡಾ ತಂಡದಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಕುರಿತಂತೆ ಮುನ್ಸೂಚನೆ ನೀಡಿದ್ದಾರೆ.