Asianet Suvarna News Asianet Suvarna News

ಜೊಕೊವಿಚ್ ಮಣಿಸಿದ ಮರ್ರೆ ಚಾಂಪಿಯನ್

‘‘ನನಗೆ ತುಂಬಾ ಸಂತಸವಾಗಿದೆ. ವಿಶ್ವದ ನಂ.1 ಸ್ಥಾನ ನಿಜಕ್ಕೂ ವಿಶೇಷವಾದದ್ದಾಗಿದೆ. ಇದನ್ನು ನಾನು ವೃತ್ತಿ ಜೀವನದಲ್ಲಿ ನಿರೀಕ್ಷಿಸಿರಲಿಲ್ಲ. ಜೊಕೊವಿಚ್ ಅವರೊಂದಿಗೆ ಗ್ರಾಂಡ್‌ಸ್ಲಾಮ್ ಫೈನಲ್ಸ್‌ನಲ್ಲಿ ಸೆಣಸಿದ್ದೇ, ಅದರಂತೆ ಇದು ಕೂಡ ಒಂದಾಗಿದೆ’’

- ಆ್ಯಂಡಿ ಮರ್ರೆ, ಬಿಟನ್ನಿನ ಟೆನಿಸಿಗ

Andy Murray wins ATP finals to end the year as world No1

ಪ್ಯಾರೀಸ್(ನ.21): ಟೂರ್ನಿಯುದ್ದಕ್ಕೂ ಪ್ರಭಾವಿ ಪ್ರದರ್ಶನ ನೀಡಿದ ಇಬ್ಬರು ದಿಗ್ಗಜ ಆಟಗಾರರ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಬ್ರಿಟನ್ನಿನ ಸ್ಟಾರ್ ಟೆನಿಸಿಗ ಆ್ಯಂಡಿ ಮರ್ರೆ, ಮಾಜಿ ನಂ.1 ಸರ್ಬಿಯಾದ ನೊವಾಕ್ ಜೊಕೊವಿಚ್ ಅವರನ್ನು ಮಣಿಸಿ ಮೊದಲ ಬಾರಿಗೆ ಎಟಿಪಿ ವರ್ಲ್ಡ್ ಟೂರ್ ಫೈನಲ್ಸ್ ಟ್ರೋಫಿಯನ್ನು ಜಯಿಸಿದ್ದಾರೆ. ಈ ಪ್ರಶಸ್ತಿಯೊಂದಿಗೆ ಮರ್ರೆ ವೃತ್ತಿ ಬದುಕಿನಲ್ಲಿ 44ನೇ ಟ್ರೋಫಿ ಗೆದ್ದ ಸಾಧನೆ ಮಾಡಿದರು.

ಇಲ್ಲಿನ ಒ2 ಅರೇನಾದಲ್ಲಿ ಭಾನುವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಹಣಾಹಣಿಯಲ್ಲಿ ಆ್ಯಂಡಿ ಮರ್ರೆ 6-3, 6-4 ಸೆಟ್‌'ಗಳಿಂದ ನೊವಾಕ್ ಜೊಕೊವಿಚ್ ಎದುರು ಗೆಲುವು ಪಡೆದರು. 2 ವಾರಗಳ ಹಿಂದಷ್ಟೇ ಜೊಕೊವಿಚ್ ಅವರಿಂದ ದಾಖಲೆಯ 122 ವಾರಗಳ ವಿಶ್ವದ ನಂ.1 ಸ್ಥಾನವನ್ನು ಕಸಿದಿದ್ದರು. ಇದೀಗ ಒಂದರ ಮೇಲೊಂದು ಪ್ರಶಸ್ತಿ ಜಯಿಸುವುದರೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಅಲ್ಲದೇ ಈ ಜಯದೊಂದಿಗೆ ಮರ್ರೆ 1.1 ಮಿಲಿಯನ್ ಅಮೆರಿಕ ಡಾಲರ್ (ಅಂದಾಜು 750 ಕೋಟಿ) ಪ್ರಶಸ್ತಿ ಮೊತ್ತವನ್ನು ಪಡೆದರು.

1973ರಿಂದ ಈಚೇಗೆ ವರ್ಷದ ಅಂತ್ಯದ ವೇಳೆ ಎಟಿಪಿ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆದ 17ನೇ ಟೆನಿಸಿಗ ಎಂಬ ಶ್ರೇಯಕ್ಕೆ 29 ವರ್ಷ ವಯಸ್ಸಿನ ಮರ್ರೆ ಪಾತ್ರರಾಗಿದ್ದಾರೆ.

Follow Us:
Download App:
  • android
  • ios