ಇದರ ಜೊತೆಗೆ 6 ಬಾರಿ ಆಸ್ಟ್ರೇಲಿಯನ್ ಓಪನ್ ವಿಜೇತ ಆಟಗಾರ ನೊವಾಕ್ ಜೋಕೋವಿಚ್ ಪಾಲ್ಗೊಳ್ಳುವುದು ಸಹ ಅನುಮಾನವಾಗಿದೆ.

ಸಿಡ್ನಿ(ಜ.05): ವರ್ಷದ ಮೊದಲ ಟೆನಿಸ್ ಗ್ರ್ಯಾಂಡ್ ಸ್ಲಾಮ್ ಆಸ್ಟ್ರೇಲಿಯನ್ ಓಪನ್‌'ನಿಂದ ವಿಶ್ವದ ಮಾಜಿ ನಂ.1 ಆಟಗಾರ ಬ್ರಿಟನ್‌'ನ ಆ್ಯಂಡಿ ಮರ್ರೆ ಹಿಂದೆ ಸರಿದಿದ್ದಾರೆ.

ಗಾಯದಿಂದ ಚೇತರಿಸಿಕೊಳ್ಳದ ಕಾರಣ ಇದೇ ಜ.15 ರಿಂದ ಆರಂಭವಾಗಲಿರುವ ಟೂರ್ನಿಯಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಮರ್ರೆ ಹೇಳಿದ್ದಾರೆ. ಇದೇ ವೇಳೆ ಜಪಾನ್‌'ನ ಕೇ ನಿಶಿಕೋರಿ ಕೂಡ ಗಾಯದ ಸಮಸ್ಯೆ ಯಿಂದ ಬಳಲುತ್ತಿದ್ದು ಆಸ್ಟ್ರೇಲಿಯನ್ ಓಪನ್ ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದರ ಜೊತೆಗೆ 6 ಬಾರಿ ಆಸ್ಟ್ರೇಲಿಯನ್ ಓಪನ್ ವಿಜೇತ ಆಟಗಾರ ನೊವಾಕ್ ಜೋಕೋವಿಚ್ ಪಾಲ್ಗೊಳ್ಳುವುದು ಸಹ ಅನುಮಾನವಾಗಿದೆ.