ದಾಖಲೆಯ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ವಿಜೇತ ಸ್ವಿಸ್‌'ನ ರೋಜರ್ ಫೆಡರರ್ 4ನೇ ಸ್ಥಾನ ಮತ್ತು ಸ್ಪೇನ್‌'ನ ರಾಫೆಲ್ ನಡಾಲ್ 5ನೇಯ ಸ್ಥಾನದಲ್ಲಿದ್ದಾರೆ.

ಮ್ಯಾಡ್ರಿಡ್(ಮೇ.08): ಬ್ರಿಟನ್‌'ನ ಸ್ಟಾರ್ ಟೆನಿಸ್ ಆಟಗಾರ ಆ್ಯಂಡಿ ಮರ್ರೆ, ಎಟಿಪಿ ವಿಶ್ವ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಇಂದು ಪ್ರಕಟವಾದ ಶ್ರೇಯಾಂಕಪಟ್ಟಿಯಲ್ಲಿ ಮರ್ರೆ ಮೊದಲ ಸ್ಥಾನದಲ್ಲಿದ್ದರೆ, ಸರ್ಬಿಯಾದ ನೊವಾಕ್ ಜೊಕೊವಿಚ್ 2ನೇ ಸ್ಥಾನ ಹಾಗೂ ಸ್ವಿಜರ್‌ಲೆಂಡ್‌'ನ ಸ್ಟಾನಿಸ್ಲಾಸ್ ವಾವ್ರಿಂಕಾ ಮೂರನೇ ಸ್ಥಾನದಲ್ಲಿ ಭದ್ರವಾಗಿದ್ದಾರೆ.

ಇನ್ನು ದಾಖಲೆಯ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ವಿಜೇತ ಸ್ವಿಸ್‌'ನ ರೋಜರ್ ಫೆಡರರ್ 4ನೇ ಸ್ಥಾನ ಮತ್ತು ಸ್ಪೇನ್‌'ನ ರಾಫೆಲ್ ನಡಾಲ್ 5ನೇಯ ಸ್ಥಾನದಲ್ಲಿದ್ದಾರೆ. ಇನ್ನು ಕಳೆದ ಭಾನುವಾರವಷ್ಟೇ ಇಸ್ತಾನುಬುಲ್ ಓಪನ್ ಫೈನಲ್ ಪ್ರಶಸ್ತಿಯನ್ನು ಜಯಿಸಿದ್ದ ಕ್ರೋಯೇಶಿಯಾದ ಮರಿನ್ ಸಿಲಿಕ್ 7ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಜಪಾನಿನ ಕೀ ನಿಶಿಕೋರಿ 8ನೇ ಸ್ಥಾನ ಪಡೆದಿದ್ದಾರೆ.