Asianet Suvarna News Asianet Suvarna News

ಎಟಿಪಿ ಶ್ರೇಯಾಂಕದಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಮರ್ರೆ, ಕೆರ್ಬರ್

ಇದೇ ವೇಳೆ ಮಹಿಳೆಯರ ವಿಭಾಗದಲ್ಲಿ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್‌ ಫ್ರೆಂಚ್‌ ಓಪನ್‌ ಮೊದಲ ಸುತ್ತಿನಲ್ಲೇ ನಿರ್ಗಮಿಸಿದರೂ, ಅಗ್ರಸ್ಥಾನದಲ್ಲೇ ಉಳಿದಿದ್ದಾರೆ.

Andy Murray remains at the top of ATP Ranking
  • Facebook
  • Twitter
  • Whatsapp

ಲಂಡನ್‌(ಮೇ.30): ಎಟಿಪಿ ವಿಶ್ವ ಟೆನಿಸ್‌ ಶ್ರೇಯಾಂಕದ ನೂತನ ಪಟ್ಟಿ ಪ್ರಕಟಗೊಂಡಿದ್ದು ಪುರುಷರ ವಿಭಾಗದಲ್ಲಿ ಬ್ರಿಟನ್‌'ನ ಆ್ಯಂಡಿ ಮರ್ರೆ ನಂ. 1 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಕಳೆದ ನವೆಂಬರ್‌'ನಿಂದ ಆ್ಯಂಡಿ ಮರ್ರೆ ಮೊದಲ ಸ್ಥಾನ ಉಳಿಸಿಕೊಂಡಿದ್ದು, ನೊವಾಕ್‌ ಜೋಕೋವಿಚ್‌ 2ನೇ ಸ್ಥಾನದಲ್ಲಿದ್ದಾರೆ.

ಇನ್ನು ಸ್ಟಾನ್‌ ವಾವ್ರಿಂಕಾ 3ನೇ ಸ್ಥಾನದಲ್ಲಿದ್ದಾರೆ. ನಡಾಲ್‌ ಹಾಗೂ ಫೆಡರರ್‌ ಕ್ರಮವಾಗಿ 4 ಹಾಗೂ 5ನೇ ಸ್ಥಾನ ಪಡೆದಿದ್ದಾರೆ.

ಇದೇ ವೇಳೆ ಮಹಿಳೆಯರ ವಿಭಾಗದಲ್ಲಿ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್‌ ಫ್ರೆಂಚ್‌ ಓಪನ್‌ ಮೊದಲ ಸುತ್ತಿನಲ್ಲೇ ನಿರ್ಗಮಿಸಿದರೂ, ಅಗ್ರಸ್ಥಾನದಲ್ಲೇ ಉಳಿದಿದ್ದಾರೆ. ಎರಡನೇ ಸ್ಥಾನದಲ್ಲಿ ಸೆರೆನಾ ವಿಲಿಯಮ್ಸ್ ಹಾಗೂ ಕರೋಲಿನಾ ಪ್ಲಿಸ್ಕೋವಾ ನಂತರದ ಸ್ಥಾನ ಪಡೆದಿದ್ದಾರೆ.

Follow Us:
Download App:
  • android
  • ios