Asianet Suvarna News Asianet Suvarna News

ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟ ಆ್ಯಂಡಿ ಮರ್ರೆ

ಪಂದ್ಯ​ಕ್ಕೂ ಮುನ್ನವೇ ಗಾಯದ ಸಮ​ಸ್ಯೆ​ಯಿಂದಾಗಿ ಮಿಲೊಸ್‌ ರೊವೊ​ನಿಕ್‌ ಅವರು ಪಂದ್ಯ​ದಿಂದ ಹಿಂದೆ ಸರಿ​ದರು. ಹೀಗಾಗಿ, ಮರ್ರೆ ಅನಾ​ಯಾ​ಸ​ವಾಗಿ ಫೈನಲ್‌ ಪ್ರವೇ​ಶಿ​ಸಿ​ದ್ದ​ಲ್ಲದೆ, ವಿಶ್ವ ಶ್ರೇಯಾಂಕದಲ್ಲಿ ನಂಬ​ರ್‌​ಒನ್‌ ಸ್ಥಾನಕ್ಕೂ ಲಗ್ಗೆ​ಯಿ​ಟ್ಟರು. 

Andy Murray becomes world number one after Raonic withdraws from Paris Masters

ಪ್ಯಾರಿಸ್‌ (ನ.06): ಪ್ಯಾರಿಸ್‌ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯ ಫೈನಲ್‌ ಪ್ರವೇ​ಶಿ​ಸುವ ಮೂಲಕ ಮರ್ರೆ, ವಿಶ್ವದ ಟೆನಿಸ್‌ ಶ್ರೇಯಾಂಕದಲ್ಲಿ ಅಗ್ರಸ್ಥಾನ​ಕ್ಕೇ​ರಿ​ದ್ದಾರೆ.

ಈ ಸಾಧನೆ ಮಾಡುವ ಮೂಲಕ, 122 ವಾರಗಳ ಕಾಲ ನಂಬ​ರ್‌​ಒ​ನ್‌ ಸ್ಥಾನ​ದಲ್ಲಿ ವಿರಾ​ಜ​ಮಾ​ನ​ರಾ​ಗಿದ್ದ ಸರ್ಬಿ​ಯಾದ ಸ್ಟಾರ್‌ ಟೆನಿ​ಸಿಗ ನೊವಾಕ್‌ ಜೊಕೊ​ವಿಚ್‌ ಅವರನ್ನು ಕೆಳ​ಗಿ​ಸು​ವಲ್ಲಿ ಯಶ​ಸ್ವಿ​ಯಾ​ಗಿ​ದ್ದಾರೆ ಮರ್ರೆ. ಅಲ್ಲದೆ, ಅವರ ವೃತ್ತಿ​ಜೀ​ವ​ನ​ದಲ್ಲಿ ಮೊಟ್ಟಮೊದಲ ಬಾರಿಗೆ ನಂಬ​ರ್‌​ಒನ್‌ ಸ್ಥಾನ​ಕ್ಕೇ​ರಿ​ದ್ದಾರೆ. 1973ರಲ್ಲಿ ಎಟಿಪಿ ಶ್ರೇಯಾಂಕ ಕಂಪ್ಯೂ​ಟ​ರೀ​ಕ​ರ​ಣ​ವಾದ ನಂತರ ಬ್ರಿಟನ್‌ ಪಾಲಿಗೆ ಟೆನಿಸ್‌ ರಂಗ​ದಲ್ಲಿ ನಂಬ​ರ್‌ಒನ್‌ ಪಟ್ಟ ಒಲಿ​ದಿ​ರು​ವುದೂ ಇದೇ ಮೊದಲು
ಹಾಲಿ ಟೂರ್ನಿ​ಯಲ್ಲಿ ನೊವಾಕ್‌ ಅವ​ರನ್ನು ಹಿಂದಿಕ್ಕಿ ಅಗ್ರ​ಸ್ಥಾ​ನ​ಕ್ಕೇ​ರ​ಬೇ​ಕಾ​ದರೆ ಮರ್ರೆ, ಸೆಮಿ​ಫೈ​ನಲ್‌ ಪಂದ್ಯ​ದಲ್ಲಿ ಕೆನಡಾದ ಮಿಲೊಸ್‌ ರೊವೊ​ನಿ​ಕ್‌ ಅವ​ರನ್ನು ಮಣಿಸಿ ಫೈನಲ್‌ ಪ್ರವೇ​ಶಿ​ಸ​ಬೇ​ಕಿತ್ತು. ಭಾರ​ತೀಯ ಕಾಲ​ಮಾ​ನದ ಪ್ರಕಾರ, ರಾತ್ರಿ 9 ಗಂಟೆಗೆ ನಡೆ​ಯ​ಬೇ​ಕಿದ್ದ ಪಂದ್ಯ​ಕ್ಕೂ ಮುನ್ನವೇ ಗಾಯದ ಸಮ​ಸ್ಯೆ​ಯಿಂದಾಗಿ ಮಿಲೊಸ್‌ ರೊವೊ​ನಿಕ್‌ ಅವರು ಪಂದ್ಯ​ದಿಂದ ಹಿಂದೆ ಸರಿ​ದರು. ಹೀಗಾಗಿ, ಮರ್ರೆ ಅನಾ​ಯಾ​ಸ​ವಾಗಿ ಫೈನಲ್‌ ಪ್ರವೇ​ಶಿ​ಸಿ​ದ್ದ​ಲ್ಲದೆ, ವಿಶ್ವ ಶ್ರೇಯಾಂಕದಲ್ಲಿ ನಂಬ​ರ್‌​ಒನ್‌ ಸ್ಥಾನಕ್ಕೂ ಲಗ್ಗೆ​ಯಿ​ಟ್ಟರು. 
ಈ ವರ್ಷದ ತಮ್ಮ ಟೆನಿಸ್‌ ಪಯ​ಣ​ದಲ್ಲಿ ತಾವು ಆಡಿದ 12 ಟೂರ್ನಿ​ಗ​ಳಲ್ಲಿ 11ರಲ್ಲಿ ಫೈನಲ್‌ ಪ್ರವೇಶ, ಒಟ್ಟಾ​ರೆ​ಯಾಗಿ 73 ಪಂದ್ಯ​ಗ​ಳಲ್ಲಿ ಜಯ ದಾಖ​ಲಿ​ಸಿದ್ದು ಅಗ್ರ​ಸ್ಥಾ​ನಕ್ಕೆ ದಾಂಗು​ಡಿ​ಯಿ​ಡಲು ನೆರ​ವಾ​ಗಿದೆ. ಇದ​ಲ್ಲದೆ, ಪ್ಯಾರಿಸ್‌ ಮಾಸ್ಟರ್ಸ್‌ ಟೂರ್ನಿ​ಯಲ್ಲಿ ನೊವಾಕ್‌ ಜೊಕೊವಿಚ್‌, ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಕ್ರೊವೇಶಿಯಾದ ಮರಿನ್‌ ಸಿಲಿಕ್‌ ವಿರುದ್ಧ ಪರಾಭವ ಹೊಂದಿದ್ದು, ಮರ್ರೆ​ಯ​ವರ ಅಗ್ರ​ಸ್ಥಾ​ನದ ಪಯ​ಣವನ್ನು ಸುಲ​ಭ​ಗೊ​ಳಿ​ಸಿತ್ತು. ಶುಕ್ರವಾರ ನಡೆದಿದ್ದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಮರ್ರೆ 7-6 (11-9), 7-5 ಸೆಟ್‌ಗಳಿಂದ ಜೆಕ್‌ ಗಣರಾಜ್ಯದ ಥಾಮಸ್‌ ಬೆರ್ಡಿಕ್‌ ಎದುರು ಗೆಲುವು ಸಾಧಿಸಿದ್ದರು. 

Follow Us:
Download App:
  • android
  • ios