ಪ್ರಿಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಫ್ರಾನ್ಸ್ ಆಟಗಾರ ಹಾಗೂ ವಿಶ್ವದ ಹದಿಮೂರನೇ ಶ್ರೇಯಾಂಕಿತ ಲೂಕಾಸ್ ಪೌಲಿ ವಿರುದ್ಧ 6-3, 6-0 ಸೆಟ್‌ಗಳಿಂದ ಮರ್ರೆ ಗೆಲುವು ಪಡೆದರು. ಇದರೊಂದಿಗೆ ಈ ಋತುವಿನಲ್ಲಿನ ತನ್ನ ಸತತ ಗೆಲುವಿನ ಅಭಿಯಾನವನ್ನು ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ 17ಕ್ಕೆ ವಿಸ್ತರಿಸಿದರು.

ಪ್ಯಾರಿಸ್(ನ.04): ವಿಶ್ವದ ನಂ.1 ಸ್ಥಾನದಿಂದ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರನ್ನು ಹಿಂದಿಕ್ಕಲು ಪಣ ತೊಟ್ಟಿರುವ ಬ್ರಿಟನ್‌ನ ಅಗ್ರಕ್ರಮಾಂಕಿತ ಆಟಗಾರ ಆ್ಯಂಡಿ ಮರ್ರೆ ಪ್ಯಾರಿಸ್ ಮಾಸ್ಟರ್ಸ್‌ ಟೆನಿಸ್ ಪಂದ್ಯಾವಳಿಯಲ್ಲಿ ಕ್ವಾರ್ಟರ್‌ ಫೈನಲ್ ತಲುಪಿದ್ದಾರೆ.

ಗುರುವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪ್ರಿಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಫ್ರಾನ್ಸ್ ಆಟಗಾರ ಹಾಗೂ ವಿಶ್ವದ ಹದಿಮೂರನೇ ಶ್ರೇಯಾಂಕಿತ ಲೂಕಾಸ್ ಪೌಲಿ ವಿರುದ್ಧ 6-3, 6-0 ಸೆಟ್‌ಗಳಿಂದ ಮರ್ರೆ ಗೆಲುವು ಪಡೆದರು. ಇದರೊಂದಿಗೆ ಈ ಋತುವಿನಲ್ಲಿನ ತನ್ನ ಸತತ ಗೆಲುವಿನ ಅಭಿಯಾನವನ್ನು ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ 17ಕ್ಕೆ ವಿಸ್ತರಿಸಿದರು.

ಕಳೆದ ವರ್ಷ ಇಲ್ಲಿ ರನ್ನರ್‌ ಅಪ್ ಆಗಿರುವ ಮರ್ರೆ, ಮುಂದಿನ ಸುತ್ತಿನಲ್ಲಿ ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಚ್ ವಿರುದ್ಧ ಕಾದಾಡಲಿದ್ದಾರೆ.

ಇನ್ನು ನಂ.1 ಪಟ್ಟವನ್ನು ಕಾಯ್ದುಕೊಳ್ಳುವ ಒತ್ತಡದಲ್ಲಿರುವ ಜೊಕೊವಿಚ್, ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದರೂ, ಪ್ರಿಕ್ವಾರ್ಟರ್‌ ಫೈನಲ್ ಸೆಣಸಾಟದಲ್ಲಿ ಗ್ರಿಗೊರ್ ಡಿಮಿಟ್ರೊವ್ ವಿರುದ್ಧ 4-6, 6-2, 6-3 ಸೆಟ್ ಜಯ ಸಾಧಿಸಿದರು.