ಆ್ಯಂಡ್ರೂ ಟೈ ತಮ್ಮ 4 ಓವರ್‌'ಗಳ ಸ್ಪೆಲ್‌'ನಲ್ಲಿ ಕೇವಲ 17 ರನ್ ನೀಡಿದ ಅವರು 5 ವಿಕೆಟ್ ಕಬಳಿಸಿ ಮಿಂಚಿದರು.

ರಾಜ್‌ಕೋಟ್(ಏ.14):ಟ ಆರ್‌'ಸಿಬಿಯ ಲೆಗ್ ಸ್ಪಿನ್ನರ್ ಸ್ಯಾಮುಯಲ್ ಬದ್ರಿ ಬೆಂಗಳೂರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಕೆಲವೇ ಗಂಟೆಗಳಲ್ಲಿ ರಾಜ್‌ಕೋಟ್‌'ನಲ್ಲೂ ಈ ಸಾಧನೆ ದಾಖಲಾಯಿತು.

ಗುಜರಾತ್ ಲಯನ್ಸ್‌'ನ ಆಸ್ಟ್ರೇಲಿಯಾ ಬೌಲರ್ ಆ್ಯಂಡ್ರೂ ಟೈ ಪುಣೆ ಸೂಪರ್‌'ಜೈಂಟ್ ವಿರುದ್ಧ ಸತತ 3 ವಿಕೆಟ್ ಕಬಳಿಸಿದ ಸಾಧನೆ ಮಾಡಿದರು.

ಇನ್ನಿಂಗ್ಸ್‌ನ 20ನೇ ಓವರ್‌'ನ ಮೊದಲ ಎಸೆತದಲ್ಲಿ ಅಂಕಿತ್ ಶರ್ಮಾ ವಿಕೆಟ್ ಪಡೆದ ಟೈ, 2ನೇ ಎಸೆತದಲ್ಲಿ ಮನೋಜ್ ತಿವಾರಿಯನ್ನು ಪೆವಿಲಿಯನ್‌'ಗಟ್ಟಿದರು. ಮೂರನೇ ಎಸೆತದಲ್ಲಿ ಶಾರ್ದುಲ್ ಠಾಕೂರ್ ಅವರನ್ನು ಬೌಲ್ಡ್ ಮಾಡಿದ ಟೈ ಹೊಸ ದಾಖಲೆ ಬರೆದರು.

ಆ್ಯಂಡ್ರೂ ಟೈ ತಮ್ಮ 4 ಓವರ್‌'ಗಳ ಸ್ಪೆಲ್‌'ನಲ್ಲಿ ಕೇವಲ 17 ರನ್ ನೀಡಿದ ಅವರು 5 ವಿಕೆಟ್ ಕಬಳಿಸಿ ಮಿಂಚಿದರು.