2017ರ ಏಪ್ರಿಲ್'ನಲ್ಲಿ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಟೈ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದರು. ಗುಜರಾತ್ ಪರ ಕಣಕ್ಕಿಳಿದಿದ್ದ ಟೈ ಪುಣೆ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಿತ್ತಿದ್ದರು.
ಸಿಡ್ನಿ(ಡಿ.24): ಆಸ್ಟ್ರೇಲಿಯಾ ವೇಗಿ ಆ್ಯಂಡ್ರೂ ಟೈ, ಟಿ-20 ಮಾದರಿಯಲ್ಲಿ ಒಂದೇ ವರ್ಷದಲ್ಲಿ 3 ಬಾರಿ ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಸಾಧನೆ ಮಾಡಿದ್ದಾರೆ. ಇದರ ಜತೆ ಟಿ-20ಯಲ್ಲಿ ಅತಿ ಹೆಚ್ಚು ಬಾರಿ ಹ್ಯಾಟ್ರಿಕ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಭಾರತದ ಅಮಿತ್ ಮಿಶ್ರಾ ಜತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಬಿಗ್'ಬ್ಯಾಶ್'ನಲ್ಲಿ ಪರ್ತ್ ಸ್ಕಾರ್ಚರ್ಸ್ ಪರ ಆಡುತ್ತಿರುವ ಟೈ, ಸಿಡ್ನಿ ಸಿಕ್ಸರ್ಸ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದರು. 2017ರ ಜನವರಿಯಲ್ಲಿ ನಡೆದಿದ್ದ ಬಿಗ್‌ಬ್ಯಾಶ್, ಐಪಿಎಲ್'ನಲ್ಲಿ ಕೂಡಾ ಈ ಸಾಧನೆ ಮಾಡಿದ್ದರು.
2017ರ ಏಪ್ರಿಲ್'ನಲ್ಲಿ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಟೈ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದರು. ಗುಜರಾತ್ ಪರ ಕಣಕ್ಕಿಳಿದಿದ್ದ ಟೈ ಪುಣೆ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಿತ್ತಿದ್ದರು.