ಲಾಡರ್‌ಹಿಲ್‌ (ಅಮೆರಿಕ)ಆ.04: ಮೊಣಕಾಲಿನ ಗಾಯದ ನೆಪವೊಡ್ಡಿ ಭಾರತ ವಿರುದ್ಧ ಟಿ20 ಸರಣಿಯ ಮೊದಲೆರಡು ಪಂದ್ಯಗಳಿಗೆ ಗೈರಾಗಿರುವ ವಿಂಡೀಸ್‌ ಆಲ್ರೌಂಡರ್‌ ಆ್ಯಂಡ್ರೆ ರಸೆಲ್‌, ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್‌ ಟಿ20 ಟೂರ್ನಿಯಲ್ಲಿ ಆಡುವ ಮೂಲಕ ಭಾರೀ ಟೀಕೆಗೆ ಗುರಿಯಾಗಿದ್ದಾರೆ. 

ಇದನ್ನೂ ಓದಿ: INDvWI: ಬೌಲರ್‌ಗಳ ಪರಾಕ್ರಮ; ವಿಂಡೀಸ್ ವಿರುದ್ಧ ಭಾರತಕ್ಕೆ ಗೆಲುವು!

ಏಕದಿನ ವಿಶ್ವಕಪ್‌ ವೇಳೆ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ರಸೆಲ್‌, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ಗುಣಮುಖರಾಗಿದ್ದಾರೆ ಎನ್ನುವ ವರದಿಯನ್ನು ಆಧಾರಿಸಿ ವಿಂಡೀಸ್‌ ಕ್ರಿಕೆಟ್‌ ಮಂಡಳಿ ಅವರಿಗೆ ಟಿ20 ತಂಡದಲ್ಲಿ ಸ್ಥಾನ ನೀಡಿತ್ತು. ಗಾಯದ ನೆಪ ಹೇಳಿ ಮತ್ತೊಂದು ಟಿ20 ಲೀಗ್‌ನಲ್ಲಿ ಹಣಕ್ಕಾಗಿ ಆಡುತ್ತಿದ್ದಾರೆ ಎನ್ನುವ ಆರೋಪ ರಸೆಲ್‌ ವಿರುದ್ಧ ಕೇಳಿಬಂದಿದೆ.