ಮುಂಬೈ(ಆ.28): ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪಿವಿ ಸಿಂಧುಗೆ ಚಿನ್ನದ ಪದಕ ಹಾಗೆೇ ಸುಮ್ಮನೆ ಒಲಿದು ಬಂದಿಲ್ಲ. ಇದಕ್ಕಾಗಿ  ಸಿಂಧು ತಪಸ್ಸು ಮಾಡಿದ್ದಾರೆ. ಪ್ರತಿ ದಿನ ಬೆವರು ಹರಿಸಿದ್ದಾರೆ. ಇದೀಗ ಮಹೀಂದ್ರ ಆಟೋಮೊಬೈಲ್ ಕಂಪನಿ ಮಾಲೀಕ ಆನಂದ್ ಮಹೀಂದ್ರ ಪಿವಿ ಸಿಂಧುಗೆ ಚಾಂಪಿಯನ್ ಪಟ್ಟ ಹೇಗೆ ಬಂತು ಅನ್ನೋದನ್ನು ವಿವರಿಸಿದ್ದಾರೆ. ಸಿಂಧು ಸೂತ್ರ ಇತರ ಕ್ರೀಡಾಪಟುಗಳು ಅನುಸರಿಸಿದರೆ ಚಾಂಪಿಯನ್ ಆಗೋದರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ವಿಶ್ವ ಬ್ಯಾಡ್ಮಿಂಟನ್: ಚಿನ್ನ ಗೆದ್ದು ಇತಿಹಾಸ ಬರೆದ PV ಸಿಂಧು

ಪಿವಿ ಸಿಂಧು ಅಭ್ಯಾಸ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ಮಹೀಂದ್ರ ಮಾಲೀಕ ಆನಂದ್ ಮಹೀಂದ್ರ ಕೂಡ ಗಮನಿಸಿದ್ದಾರೆ. ಈ ವಿಡಿಯೋ ನೋಡಿ ಬೆಚ್ಚಿ ಬಿದ್ದ ಆನಂದ್ ಮಹೀಂದ್ರ, ಸಿಂಧು ಯಾಕೆ ವಿಶ್ವಚಾಂಪಿಯನ್ ಅನ್ನೋದು ಈ ವಿಡಿಯೋದಿಂದ ಅರಿವಾಗುತ್ತೆ ಎಂದು ಟ್ವಿಟರ್ ಮೂಲಕ ಹೇಳಿಕೊಂಡಿದ್ದಾರೆ.

 

ಸಿಂಧು ವರ್ಕೌಟ್ ವಿಡಿಯೋ ನೋಡಿ ನಿಜಕ್ಕೂ ಅಚ್ಚರಿಯಾಗಿದೆ. ಸಿಂಧು ಯಾಕೆ ಚಾಂಪಿಯನ್ ಅನ್ನೋದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಭಾರತದ ಯುವ ಕ್ರೀಡಾಪಟುಗಳು ಸಿಂಧು ಅಭ್ಯಾಸ, ಶಿಸ್ತು, ಪರಿಶ್ರಮವನ್ನು ಅಳವಡಿಸಿಕೊಳ್ಳಬೇಕು.  ಗುರಿ ಮುಟ್ಟಲು ಕಠಿಣ ಅಭ್ಯಾಸ ಹೊರತು ಯಾವುದೇ ಶಾರ್ಟ್ ಕಟ್  ಇಲ್ಲ ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಚಾಂಪಿಯನ್ ಸಿಂಧುಗೆ ಮೋದಿ ಅಭಿನಂದನೆ; ಕ್ರೀಡಾ ಇಲಾಖೆ ಭರ್ಜರಿ ಬಹುಮಾನ!

ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಿವಿ ಸಿಂಧು, ಜಪಾನ್‌ನ ನಜೋಮಿ ಒಕುಹರಾ ವಿರುದ್ಧ 21-7, 21-7 ಗೇಮ್‌ಗಳ ಮೂಲಕ ಗೆಲುವು ಸಾಧಿಸಿದರು. ಈ ಮೂಲಕ ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆದ್ದ ಭಾರತದ ಮೊದಲ ಶಟ್ಲರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತವರಿಗೆ ಆಗಮಿಸಿರುವ ಸಿಂಧುಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಸಚಿವ ಕಿರಣ್ ರಿಜಿಜು ಸೇರಿದಂತೆ ಹಲವರು ಸನ್ಮಾನಿಸಿದ್ದಾರೆ.