ಬೆಂಗಳೂರು[ಜು.20]: ಭಾರತದ ತಾರಾ ಅಥ್ಲೀಟ್ ಹಿಮಾ ದಾಸ್ ಕೇವಲ 15 ದಿನಗಳ ಅಂತರದಲ್ಲಿ ಜಾಗತಿಕ ಮಟ್ಟದಲ್ಲಿ 4 ಚಿನ್ನದ ಪದಕ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಹ್ಲಿ ಬಳಗಕ್ಕೆ ಒಪ್ಪೊ, ಆಫ್ಘನ್ ತಂಡಕ್ಕೆ ಅಮುಲ್: ಇದು ಲಾಭದ ಕಮಾಲ್!

ಬುಧವಾರ ಜೆಕ್ ಗಣರಾಜ್ಯದಲ್ಲಿ ನಡೆದ ತೋಬರ್ ಅಥ್ಲೆಟಿಕ್ಸ್ ಕೂಟದ 200 ಮೀಟರ್ ಸ್ಪರ್ಧೆಯಲ್ಲಿ 23.25 ಸೆಕೆಂಡ್’ಗಳಲ್ಲಿ ಗುರಿ ಮುಟ್ಟುವ ಮೂಲಕ ನಾಲ್ಕನೇ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಹಿಮಾ ದಾಸ್ ಸಾಧನೆಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಇದೀಗ ದೇಶದ ಅತಿದೊಡ್ಡ ಹಾಲು ಉತ್ಫನ್ನಗಳ ಸಂಸ್ಥೆ ಅಮುಲ್ ಕೂಡಾ ವಿನೂತನವಾಗಿ ಹಿಮಾ ದಾಸ್’ಗೆ ಅಭಿನಂದನೆ ಸಲ್ಲಿಸಿದೆ.

15 ದಿನಗಳಲ್ಲಿ ನಾಲ್ಕನೇ ಚಿನ್ನ ಗೆದ್ದ ಹಿಮಾ ದಾಸ್..!

ಕಾರ್ಟೂನ್ ಚಿತ್ರದ ಮೂಲಕ, 'Das the way to go, girl' ಎಂದು ಟ್ವೀಟ್ ಮಾಡಿದೆ. ಹಿಮಾ ದಾಸ್ 4 ಚಿನ್ನದ ಪದಕ ಕೊರಳಿಗೆ ಹಾಕಿಕೊಂಡಿರವ ರೀತಿ ಚಿತ್ರಿಸಲಾಗಿದ್ದು, ’ಅಮೂಲ್ ಬೇಬಿ’ ಅಭಿನಂದನೆ ಸಲ್ಲಿಸುವಂತೆ ಚಿತ್ರಿಸಲಾಗಿದೆ.  ಇದರ ಜತೆಗೆ ಅಮೂಲ್ ಆಲ್ವೇಸ್ ಗೋಲ್ಡ್[Amul Always Gold] ಎಂದು ಬರೆಯಲಾಗಿದೆ. 

ಹಿಮಾ ದಾಸ್ ಸಾಧನೆಗೆ ಹಲವು ಕ್ಷೇತ್ರದ ಸಾಧಕರು ಅಭಿನಂದನೆ ಸಲ್ಲಿಸಿದ್ದಾರೆ.