ವಿರಾಟ್ ಕೊಹ್ಲಿಯವರನ್ನು ಕ್ರಿಕೆಟ್'ನ ವಿನ್ನರ್ ಹಾಗೂ ಅಧ್ಯಕ್ಷ ಎಂದು ಒಪ್ಪಿಕೊಂಡಿದ್ದಕ್ಕೆ ಆಸೀಸ್ ಮಾದ್ಯಮಗಳಿಗೆ ಅಭಿನಂದನೆಗಳು
ಮುಂಬೈ(ಮಾ.22): ಭಾರತ ತಂಡದ ನಾಯಕ ಕೊಹ್ಲಿಯನ್ನು ಮತ್ತೊಮ್ಮೆ ಗುರಿಯಾಗಿಸಿಕೊಂಡಿರುವ ಆಸೀಸ್ ಮಾಧ್ಯಮಗಳು, ಇದೀಗ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿ, ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹೋಲಿಸಿದ್ದವು.
‘‘ವಿರಾಟ್ ಕೊಹ್ಲಿ, ಕ್ರೀಡಾ ಜಗತ್ತಿನ ಡೊನಾಲ್ಡ್ ಟ್ರಂಪ್‌ರಂತಾಗಿದ್ದಾರೆ. ತಮ್ಮ ಮುಖ ಉಳಿಸಿಕೊಳ್ಳಲು ಅವರು ಮಾಧ್ಯಮಗಳ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಮಾತ್ರವಲ್ಲದೆ, ಆಸೀಸ್ ನಾಯಕ ಸ್ಟೀವನ್ ಸ್ಮಿತ್ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುತ್ತಿದ್ದಾರೆ'' ಎಂದು ‘ಡೈಲಿ ಟೆಲಿಗ್ರಾಫ್' ವರದಿ ಮಾಡಿದೆ.
ಈ ಟೀಕೆಗೆ ತಿರುಗೇಟು ನೀಡಿರುವ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ವಿರಾಟ್ ಕೊಹ್ಲಿಯವರನ್ನು ಕ್ರಿಕೆಟ್'ನ ವಿನ್ನರ್ ಹಾಗೂ ಅಧ್ಯಕ್ಷ ಎಂದು ಒಪ್ಪಿಕೊಂಡಿದ್ದಕ್ಕೆ ಆಸೀಸ್ ಮಾದ್ಯಮಗಳಿಗೆ ಅಭಿನಂದನೆಗಳು ಎಂದಿದ್ದಾರೆ.
