36 ವರ್ಷ ವಯಸ್ಸಿನ ಪೀಟರ್ಸನ್ ಕೂಡ ಭ್ರಷ್ಟಚಾರ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದಾರೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಹೇಳಿದೆ.
ಜೋಹಾನ್ಸ್‌ಬರ್ಗ್(ಡಿ.22): ಭ್ರಷ್ಟಚಾರ ಹಗರಣದಲ್ಲಿ ಸಿಲುಕಿರುವ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಆಲ್ವಿರೋ ಪೀಟರ್ಸನ್ ಅವರನ್ನು 2 ವರ್ಷಗಳ ಕಾಲ ಕ್ರಿಕೆಟ್ ಚಟುವಟಿಕೆಯಿಂದ ದೂರ ಉಳಿಯುವಂತೆ ತಾಕೀತು ಮಾಡಲಾಗಿದೆ.
ನವೆಂಬರ್ 12ರಿಂದ ಅನ್ವಯವಾಗುವಂತೆ ಪೀಟರ್ಸನ್'ಗೆ ನಿಷೇಧ ಶಿಕ್ಷೆ ಹೇರಲಾಗಿದೆ.
2000ದಲ್ಲಿ ದ.ಆಫ್ರಿಕಾ ತಂಡದ ಮಾಜಿ ನಾಯಕ ಹೆನ್ಸಿ ಕ್ರೋನ್ಜಿ ಅವರನ್ನು ಇದೇ ಆರೋಪದಡಿಯಲ್ಲಿ ಶಿಕ್ಷೆಗೆ ಗುರಿಯಾಗಿದ್ದರು.
36 ವರ್ಷ ವಯಸ್ಸಿನ ಪೀಟರ್ಸನ್ ಕೂಡ ಭ್ರಷ್ಟಚಾರ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದಾರೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಹೇಳಿದೆ. ಪೀಟರ್'ಸನ್ ಮ್ಯಾಚ್'ಪಿಕ್ಸಿಂಗ್'ನಲ್ಲಿ ನೇರವಾಗಿ ಪಾಲ್ಗೊಳ್ಳದಿದ್ದರೂ, ಲಂಚ ಪಡೆಯದಿದ್ದರೂ ಅದರ ಪ್ರಭಾವಕ್ಕೆ ಒಳಗಾಗಿದ್ದರೂ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ನಡೆಸಿದ ತನಿಖೆಯಿಂದ ಬಹಿರಂಗವಾಗಿದೆ.
2014/15ರಲ್ಲಿ ದ.ಆಫ್ರಿಕಾದ ದೇಶಿಯ ಟಿ20 ಟೂರ್ನಿಯ ಪಂದ್ಯಗಳನ್ನು ಫಿಕ್ಸಿಂಗ್ ಮಾಡಿದ್ದರಿಂದ ಮಾಜಿ ಅಂತಾರಾಷ್ಟ್ರೀಯ ಆಟಗಾರ ಗುಲಾಂ ಬೋಡಿ 20 ವರ್ಷ ನಿಷೇಧ ಶಿಕ್ಷೆಗೆ ಒಳಪಟ್ಟಿದ್ದರು.
