ಬೆಂಗಳೂರು[ಅ.02]: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (KSCA) ಚುನಾವಣೆಯ ಅಂತಿಮ ಅಭ್ಯರ್ಥಿಗಳ ಪಟ್ಟಿ ಮಂಗಳವಾರ ಪ್ರಕಟವಾಯಿತು. ಬ್ರಿಜೇಶ್‌ ಪಟೇಲ್‌ ಬೆಂಬಲಿತ ರೋಜರ್‌ ಬಿನ್ನಿ ಬಣ ಹಾಗೂ ಕ್ಯಾಪ್ಟನ್‌ ಎಂ.ಎಂ ಹರೀಶ್‌ ಬಣ ಚುನಾವಣಾ ಅಖಾಡಕ್ಕೆ ಸಜ್ಜಾಗಿವೆ.

ವಿಜಯ್‌ ಹಜಾರೆ ಟ್ರೋಫಿ: ಕರ್ನಾ​ಟ​ಕಕ್ಕೆ ಮೊದಲ ಸೋಲು

ಅ.3 ರಂದು ನಡೆಯಲಿರುವ ಚುನಾವಣೆ ಕದನ ಕುತೂಹಲ ಮೂಡಿಸಿದೆ. ವಲಯ ಮಟ್ಟದ ಸದಸ್ಯರಾಗಿ ರೋಜರ್‌ ಬಿನ್ನಿ ಬಣದಲ್ಲಿನ ಮೈಸೂರು ವಲಯಕ್ಕೆ ಸುಧಾಕರ್‌ ರೈ, ತಮಕೂರು ವಲಯಕ್ಕೆ ಶಶಿಧರ್‌ ಕೆ, ಧಾರವಾಡ ವಲಯಕ್ಕೆ ಅವಿನಾಶ್‌ ಹಾಗೂ ಶಿವಮೊಗ್ಗ ವಲಯಕ್ಕೆ ಅರುಣ್‌ ಡಿ.ಎಸ್‌. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

KSCA ಕ್ರಿಕೆಟ್ ಚುನಾವಣೆ; ಅಖಾಡದಲ್ಲಿ ಬಿನ್ನಿ ಹಾಗೂ ಹರೀಶ್!

ಇನ್ನುಳಿದಂತೆ ಅಧ್ಯಕ್ಷ ಹುದ್ದೆಗೆ ರೋಜರ್‌ ಬಿನ್ನಿ, ಕ್ಯಾಪ್ಟನ್‌ ಎಂ.ಎಂ. ಹರೀಶ್‌, ಉಪಾಧ್ಯಕ್ಷ ಹುದ್ದೆಗೆ ಜೆ. ಅಭಿರಾಮ್‌, ಜೋಸೆಫ್‌ ಹೂವರ್‌, ಸಿದ್ಧಲಿಂಗ ಸ್ವಾಮಿ, ಕಾರ್ಯದರ್ಶಿ ಹುದ್ದೆಗೆ ಕೆ.ಎಸ್‌. ರಘುರಾಮ್‌, ಸಂತೋಷ್‌ ಮೆನನ್‌, ಜಂಟಿ ಕಾರ‍್ಯದರ್ಶಿ ಹುದ್ದೆಗೆ ಪ್ರೀತ್‌ ಎಸ್‌. ಹೆಗ್ಡೆ, ಶಾವಿರ್‌ ತಾರಾಪೂರೆ, ಖಜಾಂಚಿ ಹುದ್ದೆಗೆ ಮಧುಕರ್‌, ವೆಂಕಟೇಶ್‌ ಗೌಡ, ವಿನಯ್‌ ಮೃತ್ಯುಂಜಯ, ಅಜೀವ ಸದಸ್ಯತ್ವಕ್ಕೆ ಗುರುದತ್‌, ಮಂಜುನಾಥ್‌, ಶಾಂತಿ ಸ್ವರೂಪ್‌, ಶ್ರೀಪತಿ ರಾವ್‌, ವಾಸುದೇವ್‌, ಬೆಂಗಳೂರು ವಲಯ ಸದಸ್ಯತ್ವಕ್ಕೆ ಬದರೀನಾಥ್‌, ಜಗದೀಶ್‌, ಕೋದಂಡರಾಮ, ಸುಧಾಕರ್‌ ರಾವ್‌, ಶಾಂತ ರಂಗಸ್ವಾಮಿ, ತಿಲಕ್‌ ನಾಯ್ಡು, ಮಂಗಳೂರು ವಲಯಕ್ಕೆ ಮಹಾಬಲ ಮರ್ಲಾ, ರತನ್‌ ಕುಮಾರ್‌, ರಾಯಚೂರು ವಲಯಕ್ಕೆ ಕುಶಾಲ್‌ ಪಾಟೀಲ್‌, ಸುದೀಂದ್ರ ಶಿಂಧೆ ಸೇರಿ 27 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.

ದುರಾಡಳಿತ ವಿರುದ್ಧ ಬ್ಯಾಟ್ ಬೀಸಿ! ರಾಜಕೀಯ ಆಯ್ತು, ಕ್ರಿಕೆಟ್‌ಗೂ ಚುನಾವಣೆ ಬಿಸಿ

2013ರ ಬಳಿಕ ಇದೇ ಮೊದಲ ಬಾರಿಗೆ KSCA  ಚುನಾವಣೆ ನಡೆಯುತ್ತಿದ್ದು, ಗೆಲುವಿಗಾಗಿ ಉಭಯ ಬಣಗಳು ಸಾಕಷ್ಟು ಕಸರತ್ತು ನಡೆಸುತ್ತಿವೆ. ಇನ್ನೊಂದು ದಿನದಲ್ಲಿ ಯಾರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ ಎನ್ನುವುದು ತಿಳಿಯಲಿದೆ.