ಹಾರ್ದಿಕ್ ಪಾಂಡ್ಯ ದುಬಾರಿ ವಸ್ತುಗಳನ್ನೇ ಬಳಸುತ್ತಾರೆ. ಶರ್ಟ್, ಶೂ, ಜೀನ್ಸ್ ಯಾವುದೇ ವಸ್ತುಗಳಿರಲಿ ದುಬಾರಿಯಾಗಿರುತ್ತೆ. ಇದೀಗ ಪಾಂಡ್ಯ ಬಳಿ ಇರೋ ವಾಚ್ ಬೆಲೆ ಬಹಿರಂಗವಾಗಿದೆ. 

ಲಂಡನ್(ಜೂ.15): ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪ್ರದರ್ಶನದಷ್ಟೇ ತಮ್ಮ ಸ್ಟೈಲ್‌ನಲ್ಲೂ ಜನಪ್ರಿಯರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಹೆಚ್ಚಾಗಿ ದುಬಾರಿ ವಸ್ತುಗಳನ್ನೇ ಬಳಸುತ್ತಾರೆ. ಈಗಾಗಲೇ ಪಾಂಡ್ಯ 1 ಲಕ್ಷ ರೂಪಾಯಿ ಬೆಲೆ ಲೂಯಿಸಿ ವಿಟ್ಟನ್ ಪ್ಯಾರಿಸ್ ಶರ್ಟ್ ಧರಿಸಿ ಸುದ್ದಿಯಾಗಿದ್ದಾರೆ. ಪಾಂಡ್ಯ ಬಳಸೋ ಸ್ನಿಕರ್ ಶೂ ಬೆಲೆ 85,000 ರೂಪಾಯಿ. ಇದೀಗ ಪಾಂಡ್ಯ ಬಳಿ ಇರೋ ವಾಚ್ ಬೆಲೆ ಬಹಿರಂಗವಾಗಿದೆ.

ಇದನ್ನೂ ಓದಿ: ಹಾರ್ದಿಕ್ ಶರ್ಟ್ ಬೆಲೆಗೆ ಬೆಂಗ್ಳೂರಲ್ಲಿ ಸಿಗುತ್ತೆ 1BHK ಬಾಡಿಗೆ ಮನೆ!

ಪಾಂಡ್ಯ ಶರ್ಟ್, ಶೂ ಬೆಲೆ ದುಬಾರಿ ನಿಜ. ಆದರೆ ಬೆಚ್ಚಿ ಬೀಳುವಂತಿಲ್ಲ. ಇದೀಗ ಪಾಂಡ್ಯ ಬಳಿ ಇರೋ ವಾಚ್ ಬೆಲೆ ಕೇಳಿದರೆ ಬೆಚ್ಚಿ ಬೀಳೋದು ಗ್ಯಾರೆಂಟಿ. ಕಾರಣ ಹಾರ್ದಿಕ್ ಪಾಂಡ್ಯ ಪಾಟೆಕ್ ಫಿಲಿಪ್ ನೌಟಿಲಸ್ ಬ್ರ್ಯಾಂಡ್ ವಾಚ್ ಧರಿಸುತ್ತಾರೆ. ವೈಟ್ ಗೋಲ್ಡ್ ಹಾಗೂ ಡೈಮಂಡ್ ಮಿಶ್ರಿತ ಈ ವಾಚ್ ಬಲೆ ಬರೋಬ್ಬರಿ 3 ಕೋಟಿ ರೂಪಾಯಿ.

ಇದನ್ನೂ ಓದಿ: ಪವನ್ ಕಲ್ಯಾಣ್ to ಪಾಂಡ್ಯ: ಮರ್ಸಡೀಸ್ ಬೆಂಝ್ AMG G63 ಸೆಲೆಬ್ರೆಟಿ ಮಾಲೀಕರು!

ಪಾಂಡ್ಯ 3 ಕೋಟಿ ರೂಪಾಯಿ ವಾಚ್ ಐಪಿಎಲ್ ಟೂರ್ನಿಗೂ ಮುನ್ನ ಖರೀದಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಬಳಿ ಹಲವು ದುಬಾರಿ ವಾಚ್‌ಗಳಿವೆ. ಎಲ್ಲಾ ವಾಚ್ ಬೆಲೆ ಲಕ್ಷ ಲಕ್ಷ ರೂಪಾಯಿ. ಪಾಂಡ್ಯ ಬಳಸೋ ಪ್ರತಿಯೊಂದು ವಸ್ತು ಕೂಡ ಅತ್ಯಂತ ದುಬಾರಿ. ಸದ್ಯ ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ಪಾಂಡ್ಯ, ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. 


View post on Instagram
View post on Instagram
View post on Instagram