Asianet Suvarna News Asianet Suvarna News

ಟೀಂ ಇಂಡಿಯಾ ಮಹಿಳಾ ತಂಡದಲ್ಲಿ ಎಲ್ಲವೂ ಸರಿಯಿಲ್ಲ!ಯಾಕೆ?

ಭಾರತದ ಮಹಿಳಾ ಕ್ರಿಕೆಟ್ ತಂಡ ಸದ್ಯ ಬಲಿಷ್ಠ ತಂಡವಾಗಿ ರೂಪುಗೊಂಡಿದೆ. ಇತ್ತೀಚೆಗಿನ ಪ್ರಮುಖ ಸರಣಿಗಳಲ್ಲಿ ಭಾರತ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ. ಇನ್ನೇನು ಪ್ರಶಸ್ತಿಗೆ ಗೆಲುವಿಗಾಗಿ ತಯಾರಿ ಆರಂಭಿಸಬೇಕು ಅನ್ನುವಷ್ಟರಲ್ಲೇ ಮಹಿಳಾ ತಂಡದಲ್ಲಿ ಬಿರುಕು ಮೂಡಿದೆ. ಅಷ್ಟಕ್ಕೂ ತಂಡದಲ್ಲಿ ಏನಾಗ್ತಿದೆ? ಇಲ್ಲಿದೆ ವಿವರ.

All is not well in Indian women's cricket team?

ದೆಹಲಿ(ಜೂ.30): ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡ ಇತ್ತೀಚಿನ ವರ್ಷಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಕಳೆದ 5 ವರ್ಷಗಳಲ್ಲಿ ಭಾರತ ಮಹಿಳಾ ತಂಡ ವಿಶ್ವಮಟ್ಟದಲ್ಲೆ ಬಾರಿ ಸದ್ದು ಮಾಡಿದೆ. ಬಲಿಷ್ಠ ತಂಡವಾಗಿ ರೂಪುಗೊಳ್ಳುತ್ತಿದ್ದಂತೆ, ಮಹಿಳಾ ತಂಡದಲ್ಲಿ ಬಿರುಕು ಕಾಣಿಸಿಕೊಂಡಿದೆ.

ಮಹಿಳಾ ಏಷ್ಯಾಕಪ್ ಫೈನಲ್ ಪಂದ್ಯದ ಸೋಲಿನ ಬಳಿಕ ಭಾರತ ತಂಡದ ಹೆಡ್ ಕೋಚ್ ತುಷಾರ್ ಆರೋಥೆ ಹಾಗೂ ತಂಡದ ಆಟಗಾರರ ನಡುವಿನ ಮನಸ್ತಾಪ ಹೆಚ್ಚಾಗಿದೆ. ಕಳೆದ ವರ್ಷದ ಮಹಿಳಾ ವಿಶ್ವಕಪ್ ಟೂರ್ನಿಗೂ ಮೊದಲೇ ತಂಡದಲ್ಲಿ ಬಿರುಕು ಮೂಡಿತ್ತು. ತಂಡದ ಆಟಗಾರರು ಕೋಚ್ ವಿರುದ್ಧ ಬಿಸಿಸಿಐಗೂ ದೂರು ನೀಡಿದ್ದರು. ಇದೀಗ ಕೋಚ್ ಹಾಗೂ ತಂಡದ ನಡುವಿನ ಕಿತ್ತಾಟ ತಾರಕಕ್ಕೇರಿದೆ.

ಬಿಸಿಸಿಐ ಇತ್ತೀಚೆಗೆ ಆಯೋಜಿಸಿದ್ದ ಸಭೆಗೆ ನಾಯಕ ಮಿಥಾಲಿ ರಾಜ್, ಟಿ20 ನಾಯಕ ಹರ್ಮನ್‌ಪ್ರೀತ್ ಕೌರ್, ಬಿಸಿಸಿಐ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸಿಓಎ ವಿನೋದ್ ರೈ ಭಾಗವಹಿಸಿದ್ದರು. ಆದರೆ ಮಹಿಳಾ ತಂಡದ  ಕೋಚ್ ತುಷಾರ್ ಅರೋಥೆ ಅವರಿಗೆ ಆಹ್ವಾನವೇ ನೀಡಿಲ್ಲ. 

2017ರ ಎಪ್ರಿಲ್‌ನಲ್ಲಿ ಮಹಿಳಾ ತಂಡದ ಕೋಚ್ ಆಗಿ ತುಷಾರ್ ಆರೋಥೆ ನೇಮಕಗೊಂಡರು. ಸೌತ್ಆಫ್ರಿಕಾ ಪ್ರವಾಸದ ವೇಳೆ ಎಲ್ಲವೂ ಸರಿಯಿತ್ತು. ಆದರೆ ಮಹಿಳಾ ವಿಶ್ವಕಪ್ ಟಿ20 ಟೂರ್ನಿಯ ಬಳಿಕ ತಂಡದಲ್ಲಿ ಭಿನ್ನಭಿಪ್ರಾಯ ಮೂಡಿದೆ. ಆಟಗಾರ್ತಿಯರ ಪ್ರತಿ ವಿಚಾರಕ್ಕೂ ಕೋತ್ ಮೂಗುತುರಿಸುತ್ತಿದ್ದಾರೆ ಎಂದು ಆರೋಪಿಸಿ ಮಹಿಳಾ ಕ್ರಿಕೆಟಿಗರು ಬಿಸಿಸಿಐಗೆ ದೂರು ಸಲ್ಲಿಸಿದ್ದರು. ಪ್ರಕರಣ ಇದೀಗ ಬಿಸಿಸಿಐ ಮೆಟ್ಟಿಲೇರಿದೆ. ಈ ಕುರಿತು ಶೀಘ್ರದಲ್ಲೇ ಬಿಸಿಸಿಐ ನಿರ್ಧಾರ ಪ್ರಕಟಿಸೋ ಸಾಧ್ಯತೆ ಇದೆ. 

Follow Us:
Download App:
  • android
  • ios