ಒಂದುವೇಳೆ ಭಾರತೀಯ ಇಬ್ಬರು ಆಟಗಾರ್ತಿಯರು ಕ್ವಾರ್ಟರ್ ಫೈನಲ್'ನಲ್ಲಿ ವಿಜೇತರಾದರೆ, ಶನಿವಾರ ನಡೆಯುವ ಸೆಮಿಫೈನಲ್'ನಲ್ಲಿ ಸೈನಾ-ಸಿಂಧು ಮುಖಾಮುಖಿಯಾಗಲಿದ್ದಾರೆ.
ಲಂಡನ್(ಮಾ.10): ರಿಯೊ ಒಲಿಂಪಿಕ್ ರಜತ ಪದಕ ವಿಜೇತೆ ಪಿ. ವಿ. ಸಿಂಧು ಹಾಗೂ ಸೈನಾ ನೆಹ್ವಾಲ್ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.
ಇದೀಗ ಭಾರತದ ಅಗ್ರಶ್ರೇಯಾಂಕಿತೆ ಸಿಂಧುವಿಗೆ ಕ್ವಾರ್ಟರ್ ಫೈನಲ್'ನಲ್ಲಿ ಅಗ್ನಿ ಪರೀಕ್ಷೆ ಎದುರಾಗಿದೆ. ಇಂದು ನಡೆಯುವ ಪಂದ್ಯದಲ್ಲಿ ಸಿಂಧು ವಿಶ್ವದ ನಂಬರ್ ಒನ್ ಶ್ರೇಯಾಂಕಿತೆ ಚೀನಾದ ಥೈ-ತ್ಜು-ಯಿಂಗ್ ಎದುರು ಕಾದಾಡಲಿದ್ದಾರೆ. ಅದೇ ರೀತಿ ಇನ್ನೊಂದು ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್, ವಿಶ್ವದ ಮೂರನೇ ಶ್ರೇಯಾಂಕಿತ ಆಟಗಾರ್ತಿ ಕೋರಿಯಾದ ಸಂಗ್ ಜಿ ಹ್ಯುನ್ ಅವರನ್ನು ಎದುರಿಸಲಿದ್ದಾರೆ.
ಒಂದುವೇಳೆ ಭಾರತೀಯ ಇಬ್ಬರು ಆಟಗಾರ್ತಿಯರು ಕ್ವಾರ್ಟರ್ ಫೈನಲ್'ನಲ್ಲಿ ವಿಜೇತರಾದರೆ, ಶನಿವಾರ ನಡೆಯುವ ಸೆಮಿಫೈನಲ್'ನಲ್ಲಿ ಸೈನಾ-ಸಿಂಧು ಮುಖಾಮುಖಿಯಾಗಲಿದ್ದಾರೆ.
ಇಲ್ಲಿನ ಬರ್ಮಿಂಗ್‌ಹ್ಯಾಂ ಬರ್ಕ್ಲೇಕಾರ್ಡ್ ಅರೇನಾದಲ್ಲಿ ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಇಂಡೋನೇಷಿಯಾದ ದಿನಾರ್ ಡ್ಯಹ್ ಅಯುಸ್ಟೈನ್ ವಿರುದ್ಧ ಆಕ್ರಮಣಕಾರಿ ಆಟವಾಡಿ 21-12, 21-4ರಿಂದ ಗೆಲುವು ಪಡೆದರು. ಇದರೊಂದಿಗೆ ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಟೂರ್ನಿಯಲ್ಲಿ ಸಿಂಧು ಎಂಟರ ಘಟ್ಟಕ್ಕೇರಿದ ಸಾಧನೆ ಮೆರೆದರು.
