ಕುಕ್ ನಾಯಕತ್ವದಲ್ಲಿ ತವರಿನಲ್ಲಿ ನಡೆದ 2013 ಹಾಗೂ 2015ರಲ್ಲಿ ಇಂಗ್ಲೆಂಡ್ ತಂಡ ಆ್ಯಶಸ್ ಸರಣಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಲಂಡನ್(ಫೆ.06): ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ 4-0 ಅಂತರದಲ್ಲಿ ಹೀನಾಯವಾಗಿ ಸೋಲುಂಡು ಇಂಗ್ಲೆಂಡ್ ಅಭಿಮಾನಿಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಟೆಸ್ಟ್ ತಂಡದ ನಾಯಕ ಅಲಿಸ್ಟರ್ ಕುಕ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಈ ಮೂಲಕ ಟೀಂ ಇಂಡಿಯಾ ವಿರುದ್ಧದ ಸರಣಿ ಬಳಿಕ ಟೆಸ್ಟ್ ತಂ ನಾಯಕನ ತೆಲೆದಂಡವಾಗಿದೆ
ಆಂಡ್ರ್ಯೂ ಸ್ಟ್ರಾಸ್ ಬಳಿಕ 2012ರಲ್ಲಿ ಪೂರ್ಣಾವಧಿ ಟೆಸ್ಟ್ ನಾಯಕತ್ವ ವಹಿಸಿಕೊಂಡಿದ್ದ ಆಲಿಸ್ಟರ್ ಕುಕ್ ಟೆಸ್ಟ್ ತಂಡದ ನಾಯಕತ್ವ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದಾರೆ.
ಇಂಗ್ಲೆಂಡ್ ನಾಯಕನಾಗಿ ಇಷ್ಟು ವರ್ಷ ತಂಡವನ್ನು ಮುನ್ನೆಡೆಸಿದ್ದು ನನಗೆ ಸಿಕ್ಕ ಅತಿ ದೊಡ್ಡ ಗೌರವವಾಗಿದೆ. ನಾಯಕ ತ್ಯಜಿಸುವುದು ನಿಜಕ್ಕೂ ಕಷ್ಟಕರ ನಿರ್ಧಾರ. ಆದರೆ ತಂಡದ ದೃಷ್ಟಿಯಿಂದ ಸರಿಯಾದ ಸಮಯದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಂಡಿದ್ದೇನೆ ಎಂದು ಕುಕ್ ತಿಳಿಸಿದ್ದಾರೆ.
ಕುಕ್ ನಾಯಕತ್ವದಲ್ಲಿ ತವರಿನಲ್ಲಿ ನಡೆದ 2013 ಹಾಗೂ 2015ರಲ್ಲಿ ಇಂಗ್ಲೆಂಡ್ ತಂಡ ಆ್ಯಶಸ್ ಸರಣಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕುಕ್ ಆಂಗ್ಲರ ಟೆಸ್ಟ್ ತಂಡವನ್ನು ಒಟ್ಟು 59 ಬಾರಿ ಮುನ್ನೆಡಿಸಿದ್ದಾರೆ.
