Asianet Suvarna News Asianet Suvarna News

ಆ್ಯಷಸ್ ಟ್ರೋಫಿ: ಆಸೀಸ್'ಗೆ ತಿರುಗೇಟು ನೀಡಿದ ಆಂಗ್ಲರು

ಕಳಪೆಯಾಟದಿಂದ ಕಂಗೆಟ್ಟಿದ್ದ ಕುಕ್ ಕೊನೆಗೂ ಫಾರ್ಮ್'ಗೆ ಮರಳಲು ಯಶಸ್ವಿಯಾಗಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಇನ್ನೂ 135 ರನ್‌'ಗಳ ಹಿನ್ನಡೆಯಲ್ಲಿದೆ.

Alastair Cook finally finds form as England enjoy best day of Ashes series

ಮೆಲ್ಬರ್ನ್(ಡಿ.27): ಈಗಾಗಲೇ 3-0 ಅಂತರದಲ್ಲಿ ಆ್ಯಷಸ್ ಟ್ರೋಫಿ ಕೈಚೆಲ್ಲಿರುವ ಇಂಗ್ಲೆಂಡ್ ನಾಲ್ಕನೇ ಟೆಸ್ಟ್'ನಲ್ಲಿ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ.

ಅಲಿಸ್ಟೈರ್ ಕುಕ್‌(104*) ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಆಸ್ಟ್ರೇಲಿಯಾಗೆ ತಿರುಗೇಟು ನೀಡಿದೆ. ಮೊದಲ ದಿನದ್ಯಂತಕ್ಕೆ 3 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿದ್ದ ಆಸ್ಟ್ರೇಲಿಯಾ, ಎರಡನೇ ದಿನ 83 ರನ್ ಕೂಡಿ ಹಾಕುವಷ್ಟರಲ್ಲಿ ಉಳಿದ 7 ವಿಕೆಟ್ ಕಳೆದುಕೊಂಡಿತು. ಸ್ಟುವರ್ಟ್ ಬ್ರಾಡ್ ಮಾರಕ ದಾಳಿಗೆ ತತ್ತರಿಸಿದ ಆಸೀಸ್ ದಿಢೀರ್ ಕುಸಿತ ಕಂಡಿತು.

ಇನ್ನು ಆರಂಭಿಕ ಆಘಾತದ ಬಳಿಕ ಇಂಗ್ಲೆಂಡ್‌'ಗೆ ಕುಕ್ (104*) ಹಾಗೂ ನಾಯಕ ಜೋ ರೂಟ್ (49*) ಆಸರೆಯಾಗಿದ್ದಾರೆ. ಕಳಪೆಯಾಟದಿಂದ ಕಂಗೆಟ್ಟಿದ್ದ ಕುಕ್ ಕೊನೆಗೂ ಫಾರ್ಮ್'ಗೆ ಮರಳಲು ಯಶಸ್ವಿಯಾಗಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಇನ್ನೂ 135 ರನ್‌'ಗಳ ಹಿನ್ನಡೆಯಲ್ಲಿದೆ.

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ 327/10 (ಡೇವಿಡ್ ವಾರ್ನರ್: 103 , ಬ್ರಾಡ್ 51/4)

ಇಂಗ್ಲೆಂಡ್ 192/2 (ಕುಕ್ 104*, ಲಯನ್ 44/1)

Follow Us:
Download App:
  • android
  • ios