ಸಚಿನ್ ಅವರ ದಾಖಲೆಯನ್ನು ಬ್ರೇಕ್ ಮಾಡಲು ಕುಕ್ ಅವರಿಗೆ ಇದು ಸುವರ್ಣವಕಾಶ ಎಂದಿರುವ ಬಾಥಮ್, ಕುಕ್ ಇನ್ನೂ ಎರಡು-ಮೂರು ವರ್ಷ ಟೆಸ್ಟ್ ಆಡಲು ಸಮರ್ಥರಿದ್ದಾರೆ.
ಲಂಡನ್(ಫೆ.07): ಕ್ರಿಕೆಟ್ ಜಗತ್ತಿನ ದಿಗ್ಗಜ ಬ್ಯಾಟ್ಸ್'ಮನ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಟೆಸ್ಟ್'ನಲ್ಲಿ ಗಳಿಸಿರುವ ರನ್ ದಾಖಲೆಯನ್ನು ಅಲಿಸ್ಟರ್ ಕುಕ್ ಮುರಿಯಲಿದ್ದಾರೆ ಎಂದು ಇಂಗ್ಲೆಂಡ್‌ನ ಮಾಜಿ ಆಲ್ರೌಂಡರ್ ಇಯಾನ್ ಬಾಥಮ್ ಅಭಿಪ್ರಾಯಪಟ್ಟಿದ್ದಾರೆ.
ಮುಂಬೈಕರ್ ಖ್ಯಾತಿಯ ಸಚಿನ್ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್'ನಲ್ಲಿ ಗರಿಷ್ಟ ರನ್ ಕಲೆಹಾಕಿದ ಆಟಗಾರ ಗೌರವಕ್ಕೆ ಭಾಜನರಾಗಿದ್ದಾರೆ.
39 ವರ್ಷ ವಯಸ್ಸಿನ ಇಂಗ್ಲೆಂಡ್'ನ ಮಾಜಿ ನಾಯಕ ಕುಕ್ ಇತ್ತೀಚೆಗಷ್ಟೇ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ 11 ಸಾವಿರ ರನ್ ಪೂರೈಸಿದ್ದರು. ಇಂಗ್ಲಂಡ್ ತಂಡಕ್ಕೆ ನಾಯಕನಾಗಿ ಹಾಗೆಯೇ ಆರಂಭಿಕ ಬ್ಯಾಟ್ಸ್'ಮನ್ ಆಗಿ ಉಪಯುಕ್ತ ಸೇವೆ ಸಲ್ಲಿಸಿದ್ದಾರೆ. ನಾಯಕತ್ವ ಸ್ಥಾನದಿಂದ ಕೆಳಗಿಳಿದ ಅವರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆಂದು ಬಾಥಮ್ ಹೇಳಿದ್ದಾರೆ.
ಸಚಿನ್ ಅವರ ದಾಖಲೆಯನ್ನು ಬ್ರೇಕ್ ಮಾಡಲು ಕುಕ್ ಅವರಿಗೆ ಇದು ಸುವರ್ಣವಕಾಶ ಎಂದಿರುವ ಬಾಥಮ್, ಕುಕ್ ಇನ್ನೂ ಎರಡು-ಮೂರು ವರ್ಷ ಟೆಸ್ಟ್ ಆಡಲು ಸಮರ್ಥರಿದ್ದಾರೆ. ಹಾಗಾಗಿ ತೆಂಡೂಲ್ಕರ್ ಗಳಿಸಿರುವ 15,921ರನ್ ದಾಖಲೆ ಮುರಿಯಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
