ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿರುವ ರಹಾನೆ ಜನ್ಮದಿನಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಸಾಕಷ್ಟು ಕ್ರಿಕೆಟಿಗರು ಜನ್ಮದಿನದ ಶುಭಕೋರಿದ್ದಾರೆ.
ಮುಂಬೈ[ಮೇ.06]: ಕ್ರಿಕೆಟ್ ಬದುಕಿನಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಾಣುತ್ತಿರುವ ಟೀಂ ಇಂಡಿಯಾದ ತಾರಾ ಕ್ರಿಕೆಟಿಗ ಅಜಿಂಕ್ಯ ರಹಾನೆ ಇಂದು 30ನೇ ವಸಂತಕ್ಕೆ ಕಾಲಿರಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿರುವ ರಹಾನೆ ಜನ್ಮದಿನಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಸಾಕಷ್ಟು ಕ್ರಿಕೆಟಿಗರು ಜನ್ಮದಿನದ ಶುಭಕೋರಿದ್ದಾರೆ.
'ಕಠಿಣ ಪರಿಶ್ರಮಪಡುವ, ಶಿಸ್ತಿನ ಹಾಗೂ ಆತ್ಮೀಯ ಕ್ರಿಕೆಟಿಗನಿಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಸಚಿನ್ ತೆಂಡುಲ್ಕರ್ ಶುಭ ಕೋರಿದ್ದರು.
ಸಚಿನ್ ಟ್ವೀಟ್’ಗೆ ಪ್ರತಿಕ್ರಿಯಿಸಿರುವ ಅಜಿಂಕ್ಯ ರಹಾನೆ, ಧನ್ಯವಾದಗಳು ಸಚಿನ್ ಪಾಜಿ. ನಿಮ್ಮ ಶುಭಾಶಯ ನನಗೆ ಸ್ಪೂರ್ತಿ. ನನ್ನ ಕ್ರಿಕೆಟ್ ಬದುಕು ರೂಪುಗೊಳ್ಳುವಲ್ಲಿ ನಿಮ್ಮ ಪಾತ್ರ ಮಹತ್ವದಾಗಿದೆ ಎಂದು ಮರು ಟ್ವೀಟ್ ಮಾಡಿದ್ದಾರೆ
