ಅಜಿಂಕ್ಯ ಗಾಯಾಳುವಾದ ಹಿನ್ನೆಲೆಯಲ್ಲಿ ಉಳಿದೆರಡು ಟೆಸ್ಟ್ ಪಂದ್ಯಗಳಿಗೆ ಕನ್ನಡಿಗ ಮನೀಶ್ ಪಾಂಡೆಗೆ ಅವಕಾಶ ನೀಡಲಾಗಿದೆ. ಮಂಡಿ ಸಮಸ್ಯೆಗೆ ಒಳಗಾಗಿರುವ ಮೊಹಮ್ಮದ್ ಶಮಿ ಸ್ಥಾನಕ್ಕೆ ಮುಂಬೈ ವೇಗಿ ಶಾರ್ದೂಲ್ ಠಾಕೂರ್`ಗೆ ಬುಲಾವ್ ನೀಡಲಾಗಿದೆ.

ನವದೆಹಲಿ(ಡಿ.07): ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡನ್ನ ಗೆದ್ದು ಬೀಗುತ್ತಿರುವ ಭಾರತ ತಂಡಕ್ಕೆ ಗಾಯಾಳು ಸಮಸ್ಯೆ ಶುರುವಾಗಿದೆ. ಮಧ್ಯಮ ಕ್ರಮಾಂಕದ ಆಟಗಾರ ಅಜಿಂಕ್ಯ ರಹಾನೆ ತೋರು ಬೆರಳಿನ ಮೂಳೆ ಮುರಿತಕ್ಕೊಳಗಾಗಿದ್ದು, ಸರಣಿಯಿಂದ ಹೊರಗುಳಿದಿದ್ದಾರೆ. ಅಭ್ಯಾಸದ ವೇಳೆ ರಹಾನೆ ಗಾಯ ಮಾಡಿಕೊಂಡಿದ್ಧಾರೆ.

ಅಜಿಂಕ್ಯ ಗಾಯಾಳುವಾದ ಹಿನ್ನೆಲೆಯಲ್ಲಿ ಉಳಿದೆರಡು ಟೆಸ್ಟ್ ಪಂದ್ಯಗಳಿಗೆ ಕನ್ನಡಿಗ ಮನೀಶ್ ಪಾಂಡೆಗೆ ಅವಕಾಶ ನೀಡಲಾಗಿದೆ. ಮಂಡಿ ಸಮಸ್ಯೆಗೆ ಒಳಗಾಗಿರುವ ಮೊಹಮ್ಮದ್ ಶಮಿ ಸ್ಥಾನಕ್ಕೆ ಮುಂಬೈ ವೇಗಿ ಶಾರ್ದೂಲ್ ಠಾಕೂರ್`ಗೆ ಬುಲಾವ್ ನೀಡಲಾಗಿದೆ.

ನಾಳೆಯಿಂದ ಮುಂಬೈನಲ್ಲಿ 4ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ.