ಮುಂಬೈ(ಮೇ.15): ಹಾಲಿ ಚಾಂಪಿಯನ್   ಮುಂಬೈ ವಿರುದ್ಧ ಭಾನುವಾರದ ಪಂದ್ಯದಲ್ಲಿ ರಾಜಸ್ಥಾನ  ನಿಧಾನಗತಿ  ಬೌಲಿಂಗ್ ಮಾಡಿದರ ಪರಿಣಾಮವಾಗಿ, ನಾಯಕ ಅಜಿಂಕ್ಯ ರಹಾನೆಗೆ ಐಪಿಎಲ್  ಆಡಳಿತ ಮಂಡಳಿ 12 ಲಕ್ಷ  ದಂಡ ವಿಧಿಸಿದೆ. 
20 ಓವರ್ ಪೂರ್ಣಗೊಳಿಸಲು ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದರಿಂದ ರಹಾನೆಗೆ  ದಂಡ ಹಾಕಲಾಗಿದೆ. ಈ ಆವೃತ್ತಿಯಲ್ಲಿ ಇದು ಮೊದಲ ನಿಯಮ ಉಲ್ಲಂಘನೆಯಾಗಿರುವುದರಿಂದ  ದಂಡ ವಿಧಿಸಲಾಗಿದ್ದು, ಮುಂದುವರಿದಲ್ಲಿ 1 ಪಂದ್ಯಕ್ಕೆ  ನಿಷೇಧಿಸಲಾಗುತ್ತದೆ.