ನವದೆಹಲಿ(ನ.01): ಇನ್ನು 90 ದಿನಗಳಲ್ಲಿ ಭಾರತೀಯ ಟೆನಿಸ್ ಸಂಸ್ಥೆಗೆ (ಎಐಟಿಎ) ನೂತನ ಅಧ್ಯಕ್ಷರನ್ನು ಆರಿಸಲಾಗುವುದು ಎಂದು ಸಂಸ್ಥೆ ಹೇಳಿದೆ.

ಇತ್ತೀಚೆಗೆ ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಅನಿಲ್ ಖನ್ನಾ ಅವರು ಸತತ 2ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ, ಕೇಂದ್ರ ಸರ್ಕಾರವು ಯಾವುದೇ ಕ್ರೀಡಾ ಸಂಸ್ಥೆಗಳಲ್ಲಿ ಎರಡು ಬಾರಿ ಪದಾಧಿಕಾರಿಗಳ ಹುದ್ದೆಯಲ್ಲಿದ್ದವರಿಗೆ ಮತ್ತೊಂದು ಅವಧಿಗೆ ಅವಕಾಶ ನೀಡಬಾರದೆಂಬ ನಿಯಮ ಜಾರಿಗೆ ತರಲು ಚಿಂತನೆ ನಡೆಸಿರುವುದರಿಂದ ಖನ್ನಾ ಅವರು ಎಐಟಿಎ ಅಧ್ಯಕ್ಷ ಸ್ಥಾನ ಒಪ್ಪಿಕೊಂಡಿಲ್ಲ.

ಈ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಖಾಲಿ ಉಳಿದಿರುವ ಅಧ್ಯಕ್ಷರ ಹುದ್ದೆಯನ್ನು ಶೀಘ್ರವೇ ಭರ್ತಿ ಮಾಡುವಂತೆ ಕೇಂದ್ರವು ಸೂಚಿಸಿದೆ.