'ನನ್ನನ್ನು ತಂಡದಿಂದ ಕೈಬಿಟ್ಟಿರುವುದು ಮಾಧ್ಯಮಗಳಿಂದ ಆನಂತರ ನನಗೆ ತಿಳಿಯಿತು. ಈ ರೀತಿ ನನ್ನ ಬಗ್ಗೆ ಎಐಟಿಎ ಸೌಜನ್ಯವನ್ನೂ ಮರೆತಿದೆ'- ರೋಹನ್ ಬೋಪಣ್ಣ
ಮುಂಬೈ(ಡಿ.27): ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಡೇವಿಸ್ ಕಪ್ ಹಣಾಹಣಿಯಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಟೆನಿಸ್ ತಂಡದಿಂದ ತಮ್ಮನ್ನು ಕೈಬಿಟ್ಟಿರುವ ಭಾರತೀಯ ಟೆನಿಸ್ ಸಂಸ್ಥೆಯ (ಎಐಟಿಎ) ನಡೆ ವಿರುದ್ಧ ರೋಹನ್ ಬೋಪಣ್ಣ ಕಿಡಿಕಾರಿದ್ದಾರೆ.
ಡಿ. 8ರಂದು ನನಗೆ ಎಐಟಿಎ ಕರೆ ಬಂದಿದ್ದು, ಡೇವಿಸ್ ಕಪ್'ಗೆ ನನ್ನ ಲಭ್ಯತೆ ಬಗ್ಗೆ ಕೇಳಲಾಯಿತು. ನಾನು ಲಭ್ಯವಿರುವುದಾಗಿ ಹೇಳಿದ್ದೆ. ಆದರೆ, ನನ್ನನ್ನು ತಂಡದಿಂದ ಕೈಬಿಟ್ಟಿರುವುದು ಮಾಧ್ಯಮಗಳಿಂದ ಆನಂತರ ನನಗೆ ತಿಳಿಯಿತು. ಈ ರೀತಿ ನನ್ನ ಬಗ್ಗೆ ಎಐಟಿಎ ಸೌಜನ್ಯವನ್ನೂ ಮರೆತಿದೆ ಎಂದು ಅವರು ಆರೋಪಿಸಿದ್ದಾರೆ.
