ಇತ್ತೀಚೆಗೆ ದುಬೈನಲ್ಲಿ ಮುಕ್ತಾಯಗೊಂಡ ಅಂಧರ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಭಾರತ ಚಾಂಪಿಯನ್ ಆಗಿತ್ತು. ರಾಜ್ಯದ ಪ್ರಕಾಶ್, ಸುನಿಲ್, ಬಸಪ್ಪ ಸ್ಥಾನ ಪಡೆದಿದ್ದರು.

ಬೆಂಗಳೂರು(ಜ.30): ಭಾರತ ತಂಡದ ಕ್ರಿಕೆಟ್ ಆಟಗಾರರಂತೆನಮಗೂ ಸೌಲಭ್ಯಗಳು ಬೇಕು. ರಾಜ್ಯ ಸರ್ಕಾರ ಅಂಧಕ್ರಿಕೆಟಿಗರರಿಗೂ ಸವಲತ್ತುಗಳನ್ನು ನೀಡಬೇಕು ಎಂದು ವಿಶ್ವವಿಜೇತ ಭಾರತ ಅಂಧರ ಕ್ರಿಕೆಟ್ ತಂಡದ ಆಟಗಾರ, ಕನ್ನಡಿಗ ಪ್ರಕಾಶ್ ಜಯರಾಮಯ್ಯ ಹೇಳಿದ್ದಾರೆ.

ಇತ್ತೀಚೆಗೆ ದುಬೈನಲ್ಲಿ ಮುಕ್ತಾಯಗೊಂಡ ಅಂಧರಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಭಾರತಚಾಂಪಿಯನ್ ಆಗಿತ್ತು. ರಾಜ್ಯದ ಪ್ರಕಾಶ್, ಸುನಿಲ್, ಬಸಪ್ಪ ಸ್ಥಾನ ಪಡೆದಿದ್ದರು. ಈ ವೇಳೆ ಮೂವರನ್ನುಗೌರವಿಸಲಾಯಿತು. ಬಳಿಕ ಮಾತನಾಡಿದ ಪ್ರಕಾಶ್, ಬೆಂಗಳೂರಿನಲ್ಲಿ ವಿಶ್ವಕಪ್ ಗೆದ್ದಾಗ ರಾಜ್ಯ ಸರ್ಕಾರ 7 ಲಕ್ಷ ನಗದು, ಸರ್ಕಾರಿ ನೌಕರಿ ನೀಡುವುದಾಗಿ ಹೇಳಿತ್ತು. ಆಭರವಸೆ ಇನ್ನೂ ಈಡೇರಿಲ್ಲ ಎಂದರು.