ಲಂಡನ್, ಮ್ಯಾಚೆಂಸ್ಟರ್ ಮತ್ತು ಬರ್ಮಿಂಗ್'ಹ್ಯಾಂ ನಗರಗಳು ಕಾಮನ್'ವೆಲ್ತ್ ಗೇಮ್ಸ್ ಆತಿಥ್ಯವಹಿಸಲು ಮುಂದೆ ಬಂದಿವೆ ಎನ್ನಲಾಗಿದೆ.

ನವದೆಹಲಿ(ಮಾ.21): ಮುಂಬರಲಿರುವ 2022ರ ಕಾಮನ್‌'ವೆಲ್ತ್ ಕ್ರೀಡಾಕೂಟದ ಆತಿಥ್ಯಕ್ಕೆ ಭಾರತ ಬಿಡ್ ಮಾಡುವುದಿಲ್ಲ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಮುಖ್ಯಸ್ಥ ಎನ್. ರಾಮಚಂದ್ರನ್ ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಸ್ಪರ್ಧೆಯಲ್ಲಿ ಹಲವಾರು ರಾಷ್ಟ್ರಗಳು ಇರುವ ಕಾರಣ ಭಾರತ ಈ ನಿರ್ಧಾರ ಕೈಗೊಂಡಿದೆ ಎಂದು ರಾಮಚಂದ್ರನ್ ಹೇಳಿದ್ದಾರೆ.

‘‘ಮೂಲಗಳ ಪ್ರಕಾರ ಡರ್ಬನ್ ನಗರ ಆತಿಥ್ಯ ಕಳೆದುಕೊಂಡಿದ್ದರೂ ಇನ್ನೂ ಅಧಿಕೃತವಾಗಿಲ್ಲ. ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜನಾ ಸಮಿತಿ ದ. ಆಫ್ರಿಕಾದೊಂದಿಗೆ ಮಾತುಕತೆ ನಡೆಸುತ್ತಿದೆ. ಈ ಮಧ್ಯೆ ಬ್ರಿಟನ್‌'ನ ಮೂರು ನಗರಗಳು ಆತಿಥ್ಯಕ್ಕೆ ಮುಂದೆ ಬಂದಿವೆ. ಹೀಗಾಗಿ, ನಾವು ಹರಾಜಿನಲ್ಲಿ ಭಾಗವಹಿಸುವುದು ಸರಿಯಲ್ಲ’’ ಎಂದು ರಾಮಚಂದ್ರನ್ ಹೇಳಿದ್ದಾರೆ.

ಲಂಡನ್, ಮ್ಯಾಚೆಂಸ್ಟರ್ ಮತ್ತು ಬರ್ಮಿಂಗ್'ಹ್ಯಾಂ ನಗರಗಳು ಕಾಮನ್'ವೆಲ್ತ್ ಗೇಮ್ಸ್ ಆತಿಥ್ಯವಹಿಸಲು ಮುಂದೆ ಬಂದಿವೆ ಎನ್ನಲಾಗಿದೆ.