ರೋಹಿತ್ ಶರ್ಮಾ ನಾಯಕತ್ವದ ಮುಂಬೈ' ಇಂಡಿಯನ್ಸ್ ಪಡೆ ಫೈನಲ್ ಸೇರಿದಂತೆ ಐಪಿಎಲ್'ನಲ್ಲಿ ಒಟ್ಟು 13 ಪಂದ್ಯ ಜಯಗಳಿಸಿ ಮೊದಲ ಸ್ಥಾನಗಳಿಸಿತ್ತು. ಪೊಲ್ಲಾರ್ಡ್, ಮಲಿಂಗಆ, ಪಾರ್ಥೀವ್ ಪಟೇಲ್, ಪಾಂಡ್ಯ ಸೇರಿದಂತೆ ಬಹುತೇಕ ಎಲ್ಲ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರು.
ನವದೆಹಲಿ(ಮೇ.23): ಇಂಡಿಯನ್ ಪ್ರೀಮಿಯರ್ ಲೀಗ್'ನ 10ನೇ ಆವೃತ್ತಿಯಲ್ಲಿ ಮುಂಬೈ ತಂಡವನ್ನು ಮುನ್ನಡೆಸಿ ಟ್ರೋಫಿ ಗೆಲ್ಲಿಸಿಕೊಟ್ಟ ರೋಹಿತ್ ಶರ್ಮಾ'ಗೆ ಬಿಸಿಸಿಐ'ನಿಂದ ಬಂಪರ್ ಸ್ಥಾನ ಒಲಿದು ಬರುವ ಸಾಧ್ಯತೆಯಿದೆ.
ರೋಹಿತ್ ಶರ್ಮಾ ನಾಯಕತ್ವದ ಮುಂಬೈ' ಇಂಡಿಯನ್ಸ್ ಪಡೆ ಫೈನಲ್ ಸೇರಿದಂತೆ ಐಪಿಎಲ್'ನಲ್ಲಿ ಒಟ್ಟು 13 ಪಂದ್ಯ ಜಯಗಳಿಸಿ ಮೊದಲ ಸ್ಥಾನಗಳಿಸಿತ್ತು. ಪೊಲ್ಲಾರ್ಡ್, ಮಲಿಂಗಆ, ಪಾರ್ಥೀವ್ ಪಟೇಲ್, ಪಾಂಡ್ಯ ಸೇರಿದಂತೆ ಬಹುತೇಕ ಎಲ್ಲ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರು.
ಆದರೆ ತಂಡದ ನೇತೃತ್ವ ವಹಿಸಿ ಗೆಲುವು ದೊರಕಿಸಿಕೊಟ್ಟ ನಾಯಕ ರೋಹಿತ್ ಶರ್ಮಾ'ಗೆ ಅದೃಷ್ಟ ಕುಲಾಯಿಸುವ ಸಾಧ್ಯತೆಯಿದೆ. ಭಾರತೀಯ ಕ್ರಿಕೆಟ್ ಮಂಡಳಿ ಶರ್ಮಾರನ್ನು ಚಾಂಪಿಯನ್ಸ್ ಟ್ರೋಫಿ'ಗೆ ಉಪನಾಯಕನ ಸ್ಥಾನ ನೀಡುವ ಬಗ್ಗೆ ಚಿಂತಿಸಿದೆ ಎನ್ನಲಾಗಿದೆ. ಅಲ್ಲದೆ ಮುಂದಿನ ಭಾರತದ ಸರಣಿಗಳಿಗೆ ಅವರೆ ಉಪ ನಾಯಕನಾಗಿ ಮುಂದುವರಿಯಲಿದ್ದಾರೆ ಎನ್ನುವ ಮಾತುಗಳು ಬಿಸಿಸಿಐ'ನ ಕೆಲವು ಮೂಲಗಳಿಂದ ಕೇಳಿಬರುತ್ತಿದೆ.
ಒಂದು ವೇಳೆ ವಿರಾಟ್ ಕೊಹ್ಲಿ ಭಾರತ ತಂಡದ ನಾಯಕನಾಗಿ ವಿಫಲವಾದರೆ ರೋಹಿತ್ ಶರ್ಮಾ'ಗೆ ಟೀಂ ಇಂಡಿಯಾ' ಸಾರಥ್ಯ ನೀಡುವ ಸಂಭವವು ಹೆಚ್ಚಾಗಿದೆ. ಕೊಹ್ಲಿ ಬಿಟ್ಟರೆ ನಾಯಕನಿಗೆ ಹೆಚ್ಚು ಸೂಕ್ತವಾಗುವ ವ್ಯಕ್ತಿ ಇವರೆ ಎಂಬುದು ಬಿಸಿಸಿಐ'ನ ಆಲೋಚನೆಯಾಗಿದೆ. ಮುಂಬೈ ಐಪಿಎಲ್ ಟ್ರೋಪಿ ಗೆದ್ದಾಗ ಭಾರತ ತಂಡದ ನಾಯಕತ್ವ ವಹಿಸುತ್ತೀರಾ ಎಂದು ರೋಹಿತ್ ಅವರನ್ನು ಮಾಧ್ಯಮದವರ ಪ್ರಶ್ನಿಸಿದಾಗ' ಅವಕಾಶ ನೀಡಿದರೆ ತಾವು ರೆಡಿ ಎಂಬ ಸುಳಿವನ್ನು ನೀಡಿದ್ದರು.