ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಕೇರಳದ ಬ್ಯಾಟ್ಸ್'ಮನ್ ರೈಫಿ ವಿನ್ಸೆಂಟ್ ಗೋಮೇಜ್ ಚೆಂಡನ್ನು ಔಟ್ ಆಫ್ ಸ್ಟೇಡಿಯಂಗೆ ಕಳಿಸಿದ್ದಾರೆ.

ಬೆಂಗಳೂರು(ಫೆ.04): ಇತ್ತೀಚಿನ ದಿನಗಳ ಕ್ರಿಕೆಟ್'ನಲ್ಲಿ ಸಿಕ್ಸರ್ ಬಾರಿಸುವುದು ತುಂಬಾ ಸಲೀಸು ಎಂಬಂತಾಗಿದೆ. ಕೆಲವೊಮ್ಮೆ ಕ್ರಿಸ್ ಗೇಲ್, ಮಹೇಂದ್ರ ಸಿಂಗ್ ಧೋನಿ, ಕಿರಾನ್ ಪೋಲಾರ್ಡ್, ಶಾಹಿದ್ ಅಫ್ರೀದಿಯಂಥ ಬಲಿಷ್ಟ ಬ್ಯಾಟ್ಸ್'ಮನ್'ಗಳು ಕೆಲವೊಮ್ಮೆ ಚೆಂಡನ್ನು ಸ್ಟೇಡಿಯಂ ಹೊರಗೆ ಕಳುಹಿಸಿದ ಪಂದ್ಯಗಳನ್ನೂ ನೋಡಿದ್ದೇವೆ.

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಎದುರಾಳಿ ಆಫ್'ಸ್ಪಿನ್ನರ್ ಮೋಯಿನ್ ಅಲಿ ಎಸೆತದಲ್ಲಿ ಚೆಂಡನ್ನು ಸ್ಟೇಡಿಯಂ ಹೊರಗೆ ಕಳಿಸಿದ್ದರು. ಈಗ ಅಂತಹದ್ದೇ ಕ್ಷಣ ನೆನಪಿಸುವಂತೆ ಮಾಡಿದ್ದಾರೆ ಕೇರಳದ ಕ್ರಿಕೆಟಿಗ. ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಕೇರಳದ ಬ್ಯಾಟ್ಸ್'ಮನ್ ರೈಫಿ ವಿನ್ಸೆಂಟ್ ಗೋಮೇಜ್ ಚೆಂಡನ್ನು ಔಟ್ ಆಫ್ ಸ್ಟೇಡಿಯಂಗೆ ಕಳಿಸಿದ್ದಾರೆ.

ಆ ವಿಡಿಯೋವನ್ನು ಎಸ್. ಶ್ರೀಶಾಂತ್ ತಮ್ಮ ಟ್ವಿಟ್ಟರ್ ಪೇಜ್'ನಲ್ಲಿ ಶೇರ್ ಮಾಡಿದ್ದಾರೆ.

ರೈಫಿ ಗೋಮೇಜ್ ಬಾರಿಸಿದ ಸಿಕ್ಸ್..

Scroll to load tweet…

ರಾಹಲ್ ಸಿಡಿಸಿದ ಸಿಕ್ಸ್..

ನಿಮಗ್ಯಾವುದು ಇಷ್ಟವಾಯ್ತು ಕಮೆಂಟ್ ಮಾಡಿ...