ಆಂಗ್ಲರ ನೆಲದಲ್ಲಿ ಸೋತು ಸುಣ್ಣವಾಗಿರುವ ಭಾರತಕ್ಕೆ ಹಿರಿಯ ಆಟಗಾರರೊಬ್ಬರು ಚೈತನ್ಯ ತುಂಬಿದ್ದಾರೆ. ಹಿರಿಯ ಆಟಗಾರ ಮಾಡಿರುವ ಟ್ವೀಟ್ ನಿಜಕ್ಕೂ ವಿಭಿನ್ನವಾಗಿದೆ.
ನವದೆಹಲಿ[ಸೆ.12] ರಾಜ್ಯದಲ್ಲಿ ಆಪರೇಶನ್ ಕಮಲದ ಮಾತು ಹರಿದಾಡುತ್ತಿದ್ದರೆ ಅತ್ತ ಟೀಂ ಇಂಡಿಯಾ ಇನ್ನೊಂದು ಆಪರೇಶನ್ ಗೆ ಸಿದ್ಧವಾಗಬೇಕಿದೆ. ಹಾಗಾದರೆ ಅದು ಯಾವ ಆಪರೇಶನ್? ಏನಿದು ಹೊಸ ಮಿಶನ್?
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನ 4-1 ಅಂತರದಿಂದ ಕೈಚೆಲ್ಲಿರುವ ನಂಬರ್ ಸ್ಥಾನದಲ್ಲಿರುವ ಟೀಂ ಇಂಡಿಯಾ ಅನೇಕರಿಂದ ಟೀಕೆಗೆ ಒಳಗಾಗಿದೆ. ಈ ಮಧ್ಯೆ ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ವಿರೇಂದ್ರ ಸೆಹ್ವಾಗ್ ತಂಡಕ್ಕೆ ಪ್ರೇರಣೆ ನೀಡುವ ಮಾತನಾಡಿದ್ದಾರೆ.
ಟ್ವಿಟ್ಟರ್ನಲ್ಲಿ ಸರಣಿ ಗೆದ್ದ ಇಂಗ್ಲೆಂಡ್ ತಂಡಕ್ಕೆ ಅಭಿನಂದನೆ ಸಲ್ಲಿಕೆ ಮಾಡಿರುವ ಸೆಹ್ವಾಗ್, ಟೀಂ ಇಂಡಿಯಾ ಕೂಡ ಉತ್ತಮ ಪ್ರದರ್ಶನ ನೀಡಿದೆ. ಆದರೆ, ಕೆಲವೊಂದು ವೇಳೆ ಬ್ಯಾಟ್ನಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿ ಬಂದಿಲ್ಲ.. ಅದಕ್ಕೆ ಹಲವು ಕಾರಣ ಇದೆ ಎಂದಿದ್ದಾರೆ.
ಆದರೆ ರಾಹುಲ್ ಹಾಗೂ ಪಂತ್ ಬ್ಯಾಟಿಂಗ್ ನಿಜಕ್ಕೂ ಅಮೋಘವಾಗಿತ್ತು. ಮುಂದಿನ ವಿದೇಶಿ ಪ್ರಯಾಣ ಬೆಳೆಸುವುದಕ್ಕೂ ಮುನ್ನ ಸಾಕಷ್ಟು ತರಬೇತಿ ಮಾಡಿಕೊಳ್ಳಬೇಕು. ಮುಗಿದಿದ್ದು ಮುಗಿದಿದೆ. ಇನ್ನು ಮುಂದೆ ಮಿಶನ್ ಆಸ್ಟ್ರೇಲಿಯಾ ಶುರುಮಾಡಬೇಕಿದೆ ಎಂದಿದ್ದಾರೆ.
