ಹಸು ಆಯ್ತು ಇದೀಗ ಎಮ್ಮೆ ಗಿಫ್ಟ್..! ಸೌಂದರ್ಯಕ್ಕೆ ಹಸುವಿನ ಹಾಲಂತೆ, ಶಕ್ತಿಗೆ ಎಮ್ಮೆ ಹಾಲು ಕುಡೀಬೇಕಂತೆ..!

First Published 7, Feb 2018, 12:08 PM IST
After failed cow for boxer plan Haryana mulls buffalo for wrestler
Highlights

ಈ ಹಿಂದೆ ವಿಶ್ವ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌'ಶಿಪ್‌'ನಲ್ಲಿ ಪದಕ ಜಯಿಸಿದ್ದ ಹರ್ಯಾಣದ ಮಹಿಳಾ ಬಾಕ್ಸರ್‌'ಗಳಿಗೆ ಸಚಿವ ಧನ್ಕರ್ ಹಸುಗಳನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ, ಸರ್ಕಾರ ನೀಡಿರುವ ಹಸುಗಳು ಗೊಡ್ಡು ಹಸುಗಳಾಗಿವೆ. ಹಾಲು ಕೊಡುವುದಕ್ಕಿಂತ ಒದೆಯುವುದೇ ಜಾಸ್ತಿ. ಅವುಗಳಿಗೆ ಮೇವು ಹಾಕುವುದು ವ್ಯರ್ಥ ಎಂದು ಕಳೆದ ಕೆಲ ತಿಂಗಳ ಹಿಂದಷ್ಟೇ ಮೂವರು ಮಹಿಳಾ ಬಾಕ್ಸರ್‌'ಗಳು ಹಸುಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಚಂಡೀಗಢ(ಫೆ.07): ಈ ಮೊದಲು ಬಾಕ್ಸರ್‌'ಗಳಿಗೆ ಹಸುಗಳನ್ನು ಉಡುಗೊರೆಯಾಗಿ ನೀಡಿ ಮುಜುಗರಕ್ಕೆ ಒಳಗಾಗಿದ್ದ ಹರ್ಯಾಣ ಸರ್ಕಾರ ಇದೀಗ ಕುಸ್ತಿಪಟುಗಳಿಗೆ ಎಮ್ಮೆಗಳನ್ನು ನೀಡಲು ಮುಂದಾಗಿದೆ. ಈ ಹಿಂದೆ ಬಾಕ್ಸರ್‌'ಗಳಿಗೆ ಹಸುಗಳನ್ನು ಉಡುಗೊರೆಯಾಗಿ ನೀಡಿದ್ದ ಹರ್ಯಾಣದ ಪಶು ಸಂಗೋಪನೆ ಸಚಿವ ಓಂ ಪ್ರಕಾಶ್ ಧನ್ಕರ್ ಅವರೇ ಈಗಲೂ ಎಮ್ಮೆ ನೀಡುವುದಾಗಿ ಘೋಷಿಸಿದ್ದಾರೆ.

‘ಎಮ್ಮೆ ಹಾಲು ಕುಡಿಯುವುದರಿಂದ ಕುಸ್ತಿಪಟು ಮತ್ತು ಕ್ರೀಡಾಪಟುಳುಗಳಿಗೆ ಶಕ್ತಿ ಬರುತ್ತದೆ. ಶುದ್ಧ ಹಾಗೂ ತಾಜಾ ಹಾಲು ಕುಡಿಯಲಿ ಎಂದು ಕುಸ್ತಿಪಟುಗಳಿಗೆ ಎಮ್ಮೆಗಳನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ’ ಎಂದು ಧನ್ಕರ್ ಹೇಳಿದ್ದಾರೆ. ‘ಶಕ್ತಿ ಬೇಕಾದರೆ ಎಮ್ಮೆ ಹಾಲನ್ನು ಕುಡಿಯಿರಿ. ಸೌಂದರ್ಯ ಹಾಗೂ ಬುದ್ಧಿಶಕ್ತಿ ಬೇಕಾದರೆ ಹಸುವಿನ ಹಾಲು ಕುಡಿಯಿರಿ’ ಎಂದು ಧನ್ಕರ್ ಹೇಳಿದ್ದಾರೆ. ಕಳೆದ ಭಾನುವಾರ ಹರ್ಯಾಣದ ಹಿಸ್ಸಾರ್‌'ನಲ್ಲಿ ನಡೆದಿದ್ದ ಏಷ್ಯಾ ಎಮ್ಮೆಗಳ ಜಾತ್ರೆಯಲ್ಲಿ ಯಶಸ್ವಿ ಕ್ರೀಡಾಪಟುಗಳಿಗೆ ಎಮ್ಮೆಗಳನ್ನು ಗಿಫ್ಟ್ ನೀಡುವುದಾಗಿ ಹೇಳಿದ್ದಾರೆ.

loader