ನವದೆಹಲಿ(ಸೆ.27): ಓಮನ್‌ನ ಮಸ್ಕಟ್‌ನಲ್ಲಿ ಅ.18ರಿಂದ ನಡೆಯಲಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಗಾಗಿ ಭಾರತ ಹಾಕಿ ಸಂಸ್ಥೆ, ಬುಧವಾರ 18 ಸದಸ್ಯರ ತಂಡವನ್ನು ಪ್ರಕಟಿಸಿತು. ತಂಡದ ನಾಯಕನನ್ನು ಮತ್ತೆ ಬದಲಿಸಲಾಗಿದೆ.

ಶ್ರೀಜೇಶ್ ಬದಲಿಗೆ ಮನ್'ಪ್ರೀತ್ ಸಿಂಗ್‌ಗೆ ನಾಯಕತ್ವದ ಹೊಣೆ ಹೊರಿಸಲಾಗಿದೆ. ನವೆಂಬರ್‌ನಲ್ಲಿ ವಿಶ್ವಕಪ್ ನಡೆಯಲಿರುವ ಕಾರಣ,ಎಸ್.ವಿ ಸುನಿಲ್ ಹಾಗೂ ರೂಪಿಂದರ್ ಪಾಲ್ ಸಿಂಗ್‌ಗೆ ವಿಶ್ರಾಂತಿ ನೀಡಲಾಗಿದೆ.

ತಂಡ:

ಗೋಲ್‌ಕೀಪರ್ಸ್‌: ಶ್ರೀಜೇಶ್, ಕೃಷನ್. ಡಿಫೆಂಡರ್ಸ್‌: ಹರ್ಮನ್ ಪ್ರೀತ್, ಗುರೀಂದರ್, ವರುಣ್, ಕೊತಾಜಿತ್ ಸಿಂಗ್, ಸುರೇಂದರ್, ಜರ್ಮನ್‌ಪ್ರೀತ್, ಹಾರ್ದಿಕ್ 

ಮಿಡ್‌ಫೀಲ್ಡರ್ಸ್‌: ಮನ್‌ಪ್ರೀತ್, ಸುಮಿತ್, ನೀಲಕಂಠ, ಲಲಿತ್, ಚಿಂಗ್ಲೆನ್ಸನಾ.

ಫಾರ್ವರ್ಡ್ಸ್: ಆಕಾಶ್‌ದೀಪ್, ಗುರ್ಜಂತ್, ಮನ್‌ದೀಪ್ ಸಿಂಗ್, ದಿಲ್‌ಪ್ರೀತ್ ಸಿಂಗ್.