ಅಬುಧಾಬಿ(ಜ.06): ಎಎಫ್‌ಸಿ ಏಷ್ಯಾಕಪ್ ಫುಟ್ಬಾಲ್ ಟೂರ್ನಿಯಲ್ಲಿ ನಾಕೌಟ್ ಕನಸಿನೊಂದಿಗೆ ಕಣಕ್ಕಿಳಿದಿರುವ ಭಾರತ ತಂಡ, ಭಾನುವಾರ ಥಾಯ್ಲೆಂಡ್ ತಂಡವನ್ನು ಎದುರಿಸಲಿದೆ. 

ಕಳೆದ ಆವೃತ್ತಿಯಲ್ಲಿ ಅರ್ಹತೆ ಗಿಟ್ಟಿಸುವಲ್ಲಿ ವಿಫಲವಾಗಿದ್ದ ಭಾರತ, ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಇನ್ನುಳಿದ ಎರಡೂ ಪಂದ್ಯಗಳಲ್ಲಿ ಡ್ರಾ ಸಾಧಿಸಿದರೂ ನಾಕೌಟ್‌ಗೆ ಪ್ರವೇಶಿಸುವ ಸಾಧ್ಯತೆಗಳಿವೆ. ಭಾರತ, ಜ.10ರಂದು ಯುಎಇ ಮತ್ತು ಜ.14ರಂದು ಬಹರೇನ್ ವಿರುದ್ಧ ಪಂದ್ಯಗಳನ್ನಾಡಲಿದೆ.ಭಾರತ 1964ರಲ್ಲಿ ರನ್ನರ್ ಅಪ್ ಆಗಿದ್ದನ್ನು ಬಿಟ್ಟರೆ ಬಳಿಕ ಒಂದು ಬಾರಿಯೂ ಫೈನಲ್ ಗೇರಿಲ್ಲ.

1984 ಮತ್ತು 2011ರಲ್ಲಿ ಟೂರ್ನಿ ಲೀಗ್ ಹಂತದಿಂದಲೇ ಭಾರತ ಹೊರಬಿದ್ದಿತ್ತು. ಅಲ್ಲದೆ ಈ ಬಾರಿ ತಂಡಗಳ ಸಂಖ್ಯೆಯನ್ನು 16 ರಿಂದ 24ಕ್ಕೆ ಹೆಚ್ಚಿಸಲಾಗಿದ್ದು, ಟೂರ್ನಿಯಲ್ಲಿ ಹೆಚ್ಚಿನ ಪೈಪೋಟಿ ನಿರೀಕ್ಷಿಸಲಾಗಿದೆ. ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ, 4ನೇ ಬಾರಿಗೆ ಎಎಫ್‌ಸಿ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದೆ.