ಮೊದಲ ಪಂದ್ಯದಲ್ಲಿ ಭಾರತ, ಥಾಯ್ಲೆಂಡ್ ವಿರುದ್ಧ ಸೆಣಸಲಿದೆ. ಟೂರ್ನಿಯಲ್ಲಿ ಒಟ್ಟು 24 ತಂಡಗಳು ಪಾಲ್ಗೊಂಡಿದ್ದು, 6 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. 

ಅಬುಧಾಬಿ: 17ನೇ ಆವೃತ್ತಿ ಎಎಫ್‌ಸಿ ಏಷ್ಯಾಕಪ್ ಫುಟ್ಬಾಲ್ ಟೂರ್ನಿ ಶನಿವಾರದಿಂದ ಆರಂಭವಾಗಲಿದ್ದು, ಸುಮಾರು 8 ವರ್ಷಗಳ ಬಳಿಕ ಭಾರತ ಕಣಕ್ಕಿಳಿಯುತ್ತಿದೆ. ಜ.6ರಿಂದ ಭಾರತದ ಅಭಿಯಾನ ಶುರುವಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕನ್ನಡದಲ್ಲಿ ಶುಭಕೋರಿದ ಜರ್ಮನಿ ಫುಟ್ಬಾಲ್ ಕ್ಲಬ್

ಮೊದಲ ಪಂದ್ಯದಲ್ಲಿ ಸುನಿಲ್ ಚೆಟ್ರಿ ನೇತೃತ್ವದ ಭಾರತ, ಥಾಯ್ಲೆಂಡ್ ವಿರುದ್ಧ ಸೆಣಸಲಿದೆ. ಟೂರ್ನಿಯಲ್ಲಿ ಒಟ್ಟು 24 ತಂಡಗಳು ಪಾಲ್ಗೊಂಡಿದ್ದು, 6 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ‘ಎ’ ಗುಂಪಿನಲ್ಲಿ ಭಾರತ ಸೇರಿದಂತೆ ಯುಎಇ, ಥಾಯ್ಲೆಂಡ್, ಬಹರೇನ್ ತಂಡಗಳಿವೆ. 

ಫುಟ್ಬಾಲ್‌: ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ

ಏಷ್ಯಾಕಪ್ ಇತಿಹಾಸದಲ್ಲಿಯೇ ಒಟ್ಟಾರೆಯಾಗಿ ಭಾರತ 4ನೇ ಬಾರಿಗೆ ಸ್ಪರ್ಧಿಸುತ್ತಿದೆ. ಫೆಬ್ರವರಿ 1ರಂದು ಫೈನಲ್ ನಡೆಯಲಿದೆ.