ಅಡಿಲೇಡ್[ಡಿ.09]: ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್’ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿನೂತನ ದಾಖಲೆ ಬರೆದಿದ್ದಾರೆ. ಪ್ರತಿಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆ ಬರೆಯುವ ವಿರಾಟ್ ಕೊಹ್ಲಿ ಇದೀಗ ಅಡಿಲೇಡ್ ಟೆಸ್ಟ್’ನಲ್ಲಿ 2 ಅಪರೂಪದ ದಾಖಲೆ ಬರೆದಿದ್ದಾರೆ.

ಆಸಿಸ್ ನೆಲದಲ್ಲಿ ವಿರಾಟ್ ಯಾವೆಲ್ಲಾ ರೆಕಾರ್ಡ್ ನಿರ್ಮಿಸುತ್ತಾರೆ..?

ತವರಿನಾಚೆ ಟೆಸ್ಟ್ ಕ್ರಿಕೆಟ್’ನಲ್ಲಿ ಕೊಹ್ಲಿ 2000 ರನ್:
ವಿದೇಶಿ ನೆಲದಲ್ಲಿ 2000 ಟೆಸ್ಟ್ ರನ್ ಬಾರಿಸಿದ ಭಾರತದ ಮೊದಲ ನಾಯಕ ಎನ್ನುವ ಕೀರ್ತಿಗೆ ವಿರಾಟ್ ಪಾತ್ರರಾಗಿದ್ದಾರೆ. ತವರಿನಲ್ಲಿ ಹಾಗೂ ತವರಿನಾಚೆ 2 ಸಾವಿರಕ್ಕೂ ಹೆಚ್ಚು ರನ್ ಬಾರಿಸಿದ ಭಾರತದ ನಾಯಕ ಎನ್ನುವ ಅಪರೂಪದ ದಾಖಲೆಯನ್ನು ಸಹಾ ನಿರ್ಮಿಸಿದ್ದಾರೆ.
ಟೆಸ್ಟ್ ಕ್ರಿಕೆಟ್’ನಲ್ಲಿ ಈ ಸಾಧನೆ ಮಾಡಿದ ಒಟ್ಟಾರೆ 5ನೇ ನಾಯಕ ಕೊಹ್ಲಿ. ಈ ಮೊದಲು ಅಲನ್ ಬಾರ್ಡರ್, ರಿಕಿ ಪಾಂಟಿಂಗ್, ಗ್ರೇಮ್ ಸ್ಮಿತ್ ಹಾಗೂ ಆಲಿಸ್ಟರ್ ಕುಕ್ ತವರಿನಾಚೆ 2 ಸಾವಿರ ರನ್ ಪೂರೈಸಿದ ಇತರೆ ನಾಯಕರಾಗಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಸಾವಿರ ರನ್:
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಒಂದು ಸಾವಿರ ಟೆಸ್ಟ್ ರನ್ ಪೂರೈಸಿದ್ದಾರೆ. ಈ ಮೂಲಕ ಸಾವಿರ ರನ್ ಪೂರೈಸಿದ 5ನೇ ಭಾರತೀಯ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ. ಇದೀಗ 1029 ರನ್’ಗಳೊಂದಿಗೆ 5ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿಗೂ ಮುನ್ನ ಸಚಿನ್[1809], ವಿವಿಎಸ್ ಲಕ್ಷ್ಮಣ್(1236), ರಾಹುಲ್ ದ್ರಾವಿಡ್[1166] ಹಾಗೂ ವಿರೇಂದ್ರ ಸೆಹ್ವಾಗ್[1031] ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.