ಬೆಂಗಳೂರು(ಆ.13): ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿ ಟ್ರೋಫಿ ಅನಾವರಣವಾಗಿದೆ. ಜಾದೂಗಾರನ ಕೈಚಳಕದ ಮೂಲಕ ಟ್ರೋಫಿ ಹಿಡಿದು ಪ್ರತ್ಯಕ್ಷರಾದ ಟೀಂ ಇಂಡಿಯಾ ಆಟಗಾರ್ತಿ ವೇದಾ ಕೃಷ್ಣಮೂರ್ತಿ ನೋಡಿ, ನಟ್ಟ ಕಿಟ್ಟ ಸುದೀಪ್ ಅಚ್ಚರಿಗೊಂಡರು. ಇಷ್ಟೇ ಅಲ್ಲ ವೇದಾಕೃಷ್ಣ ಮೂರ್ತಿ ಸೌಂದರ್ಯಕ್ಕೆ ಸುದೀಪ್ ಫಿದಾ ಆಗಿದ್ದಾರೆ.

ಇದನ್ನೂ ಓದಿ: ವಿಶೇಷ ರೀತಿಯಲ್ಲಿ KPL ಟ್ರೋಫಿ ಲಾಂಚ್; ಟೂರ್ನಿಗೆ ಶುಭಕೋರಿದ ಸುದೀಪ್!

ಟ್ರೋಫಿ ಲಾಂಚ್ ಬಳಿಕ ಮಾತನಾಡಿದ ಕಿಚ್ಚ ಸುದೀಪ್, ಟ್ರೋಫಿ ಜೊತೆ ವೇದಾ ಪ್ರತ್ಯಕ್ಷವಾದಾಗ ಎಲ್ಲರೂ ಟ್ರೋಫಿಯನ್ನೇ ನೋಡುತ್ತಿದ್ದರು. ಆದರೆ ನಾನು ಬ್ಯೂಟಿಫುಲ್ ವೇದಾ ನೋಡಿ ಮರೆತುಬಿಟ್ಟೆ ಎಂದರು.  ಬ್ಯೂಟಿಫುಲ್ ಆಟಗಾರ್ತಿಯಿಂದ ಕ್ರಿಕೆಟ್ ಸೌಂದರ್ಯವೇ ಹೆಚ್ಚಿದೆ ಎಂದು ಸುದೀಪ್ ಹೇಳಿದರು.

"

ಇದನ್ನೂ ಓದಿ: ಮಳೆಯಿಂದಾಗಿ KPL ಟೂರ್ನಿಯಲ್ಲಿ ಬದಲಾವಣೆ; ಹೊಸ ವೇಳಾಪಟ್ಟಿ ಪ್ರಕಟ!

ಇತ್ತ ಸುದೀಪ್ ಮಾತಿಗೆ ವೇದಾ ನಾಚಿ ನೀರಾದರು.  ಕಳೆದ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪ್ರದರ್ಶನವನ್ನು ವೀಕ್ಷಿಸಿದ್ದೇನೆ. ಅದರಲ್ಲೂ ವೇದಾ ಕೃಷ್ಣಮೂರ್ತಿ ಬ್ಯಾಟಿಂಗ್ ಪ್ರದರ್ಶನ ಅತ್ಯುತ್ತಮವಾಗಿತ್ತು ಎಂದು ಸುದೀಪ್ ಪ್ರಶಂಸೆ ವ್ಯಕ್ತಪಡಿಸಿದರು.