ದುಬೈ(ಮಾ.20): ಟಿ10 (10 ಓವರ್‌) ಕ್ರಿಕೆಟ್‌ ಟೂರ್ನಿಗೆ ಮುಂದಿನ 5 ವರ್ಷಗಳ ಕಾಲ ಅಬುಧಾಬಿಯ ಝಾಯೆದ್‌ ಕ್ರೀಡಾಂಗಣದಲ್ಲಿ ತವರಾಗಲಿದೆ. ಅಬುಧಾಬಿ ಕ್ರಿಕೆಟ್‌ (ಎಡಿಸಿ), ಅಬುಧಾಬಿ ಕ್ರೀಡಾ ಸಮಿತಿ ಹಾಗೂ ಪ್ರವಾಸೋದ್ಯಮ ಹಾಗೂ ಸಾಂಸ್ಕೃತಿಕ ಇಲಾಖೆಯ ಸಹಯೋಗದೊಂದಿಗೆ ಟಿ10 ಟೂರ್ನಿಯ ಆಯೋಜಕರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. 

 

 

ಇದನ್ನೂ ಓದಿ: ಟೀಕಾಕಾರರ ಕಾಲೆಳೆದ ಗೌತಮ್ ಗಂಭೀರ್

ಕಿರು ಮಾದರಿಯ ಕ್ರಿಕೆಟ್‌ ಟೂರ್ನಿ ಕೇವಲ ಝಾಯೆದ್‌ ಕ್ರೀಡಾಂಗಣದಲ್ಲಿ ಮಾತ್ರ ನಡೆಯಲಿದೆ. 2019ರಿಂದ ಒಪ್ಪಂದ ಅವಧಿ ಆರಂಭಗೊಳ್ಳಲಿದೆ. 2017ರಲ್ಲಿ ಮೊದಲ ಆವೃತ್ತಿ ನಡೆದಿತ್ತು. ಆದರೆ ಶಾರ್ಜಾದಲ್ಲಿ ಆಯೋಜನೆಯಾಗಿದ್ದ ಈ ಟೂರ್ನಿ ಕ್ರೀಡಾಂಗಣ ಸಮಸ್ಯೆ, ಆಟಗಾರರ ಒಪ್ಪಂದ ಸೇರಿದಂತೆ ಹಲವು ಸಮಸ್ಯೆ ಎದುರಿಸಿತ್ತು. ಹೀಗಾಗಿ 2018ರಲ್ಲಿ ಟೂರ್ನಿ ಆಯೋಜನೆಗೆ ಸಂಕಷ್ಟ ಎದುರಾಗಿತ್ತು.

ಇದನ್ನೂ ಓದಿ: ಅಜಿಂಕ್ಯ ರಹಾನೆ - ವಿರಾಟ್ ಕೊಹ್ಲಿ ಹೇಳಿಕೆಯಲ್ಲಿ ಗೊಂದಲ!

ನೂತನ ಒಪ್ಪಂದ ಪ್ರಕರಾ ಟಿ20 ಕ್ರಿಕೆಟ್ ಆಯೋಜಕರು 5 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದು, ಸಮಸ್ಯೆ ಪರಿಹರಿಸಿದ್ದಾರೆ. ಹೀಗಾಗಿ ಈ ವರ್ಷದಿಂದ ಸರಾಗವಾಗಿ ಟಿ20 ಕ್ರಿಕೆಟ್ ಟೂರ್ನಿ ಆಯೋಜನೆಯಾಗಲಿದೆ.