ಹಿತಸಕ್ತಿ ಆರೋಪ ಕೇಳಿಬರುವ ಸಾಧ್ಯತೆಯಿರುವುದರಿಂದ ಹಾಗೂ ತಮ್ಮ ಖಾಸಗಿ ಯೋಜನೆಗಳಿಗೆ ಹೆಚ್ಚು ಗಮನ ಹರಿಸಬೇಕಾಗಿ ಬರುವುದರಿಂದ ಸರ್ಕಾರ ನೀಡಿದ್ದ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ಸಾಮಾಜಿಕ ಜಾಲತಾಣ ಟ್ವಿಟರ್'ನಲ್ಲಿ ಪ್ರಕಟಿಸಿದ್ದಾರೆ.
ನವದೆಹಲಿ(ಡಿ.23): ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಶೂಟಿಂಗ್ ರಾಷ್ಟ್ರೀಯ ವೀಕ್ಷಕ ಹಾಗೂ ಟಾರ್ಗೇಟ್ ಓಲಿಂಪಿಕ್ ಪೋಡಿಯಂ(TOP) ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಸ್ವಹಿತಸಕ್ತಿ ಆರೋಪ ಕೇಳಿಬರುವ ಸಾಧ್ಯತೆಯಿರುವುದರಿಂದ ಹಾಗೂ ತಮ್ಮ ಖಾಸಗಿ ಯೋಜನೆಗಳಿಗೆ ಹೆಚ್ಚು ಗಮನ ಹರಿಸಬೇಕಾಗಿ ಬರುವುದರಿಂದ ಸರ್ಕಾರ ನೀಡಿದ್ದ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ಸಾಮಾಜಿಕ ಜಾಲತಾಣ ಟ್ವಿಟರ್'ನಲ್ಲಿ ಪ್ರಕಟಿಸಿದ್ದಾರೆ.
ಅಭಿನವ್ ಬಿಂದ್ರಾ ಟಾರ್ಗೇಟಿಂಗ್ ಪರ್'ಫಾರ್ಮೆನ್ಸ್ ಸೆಂಟರ್'ನ್ನು ದೇಶದಾದ್ಯಂತ ವಿಸ್ತರಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
