ಹೌದು ಡಿವಿಲಿಯರ್ಸ್‌ ತಮ್ಮ ಪತ್ನಿ ಡೇನಿಯಲ್‌ಗೆ ಪ್ರೇಮಸ್ಮಾರಕ ಎಂದೇ ಖ್ಯಾತವಾಗಿರುವ ತಾಜ್‌ಮಹಲ್ ಮುಂದೆಯೇ 2012ರಲ್ಲಿ ಪ್ರೇಮ ನಿವೇದನೆ ಮಾಡಿದ್ದರಂತೆ. ಇದಾದ ಬಳಿಕ ಈ ಜೋಡಿ 2013ರಲ್ಲಿ ಹಸಮಣೆಯನ್ನೇದ್ದರು.

ನವದೆಹಲಿ(ಮೇ.19): ಸದ್ಯ ಆರ್‌ಸಿಬಿ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಆಗಿರುವ ಎಬಿ ಡಿವಿಲಿಯರ್ಸ್‌ಗೂ ಪ್ರಪಂಚದ ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್ ಗೂ ಅವಿನಾಭಾವ ಸಂಬಂಧವಿದೆಯಂತೆ.
ಹೌದು ಡಿವಿಲಿಯರ್ಸ್‌ ತಮ್ಮ ಪತ್ನಿ ಡೇನಿಯಲ್‌ಗೆ ಪ್ರೇಮಸ್ಮಾರಕ ಎಂದೇ ಖ್ಯಾತವಾಗಿರುವ ತಾಜ್‌ಮಹಲ್ ಮುಂದೆಯೇ 2012ರಲ್ಲಿ ಪ್ರೇಮ ನಿವೇದನೆ ಮಾಡಿದ್ದರಂತೆ. ಇದಾದ ಬಳಿಕ ಈ ಜೋಡಿ 2013ರಲ್ಲಿ ಹಸಮಣೆಯನ್ನೇದ್ದರು. ಇದು ಮಾತ್ರವಲ್ಲದೇ ತಮ್ಮ ಮಗಳಿಗೂ ತಾಜ್ ಮಹಲ್ ನೆನಪಿನಲ್ಲೇ ‘ತಾಜ್’ ಎಂದು ಹೆಸರಿಟ್ಟಿದ್ದಾಗಿ ಡಿವಿಲಿಯರ್ಸ್‌ ಗುಟ್ಟನ್ನು ಬಹಿರಂಗಗೊಳಿಸಿದ್ದಾರೆ. ಡಿವಿಲಿಯರ್ಸ್‌ ದಂಪತಿಗೆ ತಾಜ್ ಸೇರಿ ಮೂವರು ಮಕ್ಕಳಿದ್ದಾರೆ.