ಮುಂಬರುವ ಭಾರತ ವಿರುದ್ಧದ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದ್ದು, 2016ರ ಜನವರಿಯಿಂದ ಟೆಸ್ಟ್ ಕ್ರಿಕೆಟ್'ನಿಂದ ದೂರ ಉಳಿದಿದ್ದ ಎಬಿಡಿ, ಭುಜದ ನೋವಿನಿಂದ ಕಳೆದೊಂದು ವರ್ಷದಿಂದ ಅಂತರಾಷ್ಟ್ರೀಯ ಕ್ರಿಕೆಟ್'ನಿಂದ ದೂರ ಉಳಿದಿದ್ದ ವೇಗಿ ಸ್ಟೇನ್ ಟೆಸ್ಟ್ ತಂಡ ಕೂಡಿಕೊಂಡಿದ್ದಾರೆ.

ಜೋಹಾನ್ಸ್'ಬರ್ಗ್(ಡಿ.19): ಜಿಂಬಾಬ್ವೆ ವಿರುದ್ಧದ 4 ದಿನಗಳ ಟೆಸ್ಟ್ ಪಂದ್ಯಕ್ಕೆ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದ್ದು, ಸ್ಫೋಟಕ ಕ್ರಿಕೆಟಿಗ ಎಬಿ ಡಿವಿಲಿಯರ್ಸ್, ಡೇಲ್ ಸ್ಟೇನ್ ಹಾಗೂ ವರ್ನಾನ್ ಫಿಲಾಂಡರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಮುಂಬರುವ ಭಾರತ ವಿರುದ್ಧದ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದ್ದು, 2016ರ ಜನವರಿಯಿಂದ ಟೆಸ್ಟ್ ಕ್ರಿಕೆಟ್'ನಿಂದ ದೂರ ಉಳಿದಿದ್ದ ಎಬಿಡಿ, ಭುಜದ ನೋವಿನಿಂದ ಕಳೆದೊಂದು ವರ್ಷದಿಂದ ಅಂತರಾಷ್ಟ್ರೀಯ ಕ್ರಿಕೆಟ್'ನಿಂದ ದೂರ ಉಳಿದಿದ್ದ ವೇಗಿ ಸ್ಟೇನ್ ಟೆಸ್ಟ್ ತಂಡ ಕೂಡಿಕೊಂಡಿದ್ದಾರೆ.

ಡಿಸೆಂಬರ್ 26 ರಿಂದ ಜಿಂಬಾಬ್ವೆ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 4 ದಿನಗಳ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಇನ್ನು ಜನವರಿ 5ರಿಂದ ಭಾರತ ವಿರುದ್ಧ ಟೆಸ್ಟ್ ಸರಣಿ ಆರಂಭವಾಗಲಿದ್ದು. ಅನುಭವಿ ಆಟಗಾರರ ಆಗಮನ ಭಾರತಕ್ಕೆ ಸವಾಲಾಗುವ ಸಾಧ್ಯತೆಯಿದೆ ಎನ್ನುವುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರವಾಗಿದೆ.