' ಕಳೆದ 12 ತಿಂಗಳಿಂದ ಈ ಬಗ್ಗೆ ಮಾತುಗಳ ಜೊತೆ ಬರವಣಿಗೆಗಳೂ ಕೇಳಿ ಬರುತ್ತಿವೆ. ಅಲ್ಲದೆ ಈ ರೀತಿಯ ನಿರ್ಧಾರ ಕೈಗೊಳ್ಳಲು ಸೂಕ್ತ ಸಮಯ ಕೂಡ. ಮಾನಸಿಕ ಹಾಗೂ ಭೌತಿಕವಾಗಿ ನನಗೆ ಆಯಾಸವಾಗಿದೆ.

ತಮ್ಮದೆ ಶೈಲಿಯ ಮೂಲಕ ಸಿಕ್ಸ್'ರ್ ಮತ್ತು ಬೌಂಡರಿ'ಗಳನ್ನು ಬಾರಿಸುವ ಮೂಲಕ ವಿಶ್ವ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡುತ್ತಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್'ಮೆನ್ ಹಾಗೂ ನಾಯಕ ಎಬಿಡಿ ವಿಲಿಯರ್ಸ್ ನಾಯಕ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಆದರೆ ಎಲ್ಲ ಮಾದರಿಯ ಕ್ರಿಕೆಟ್'ನಲ್ಲಿ ತನ್ನ ಆಟ ಮುಂದುವರಿಸುವುದಾಗಿ ತಿಳಿಸಿದ್ದಾರೆ. ನಾಯಕ ಸ್ಥಾನದಿಂದ ಕೆಳಗಿಳಿದಿರುವುದು ನಿವೃತ್ತಿ ನೀಡುವ ಸೂಚನೆಯೆ ಎಂಬ ಅನುಮಾನ ಬಹುತೇಕ ಅಭಿಮಾನಿಗಳಲ್ಲಿ ಕಾಡಿದೆ. ಆದರೆ ಇದನ್ನು ನಿರಾಕರಿಸಿರುವ ಎಬಿಡಿ ' ಕಳೆದ 12 ತಿಂಗಳಿಂದ ಈ ಬಗ್ಗೆ ಮಾತುಗಳ ಜೊತೆ ಬರವಣಿಗೆಗಳೂ ಕೇಳಿ ಬರುತ್ತಿವೆ. ಅಲ್ಲದೆ ಈ ರೀತಿಯ ನಿರ್ಧಾರ ಕೈಗೊಳ್ಳಲು ಸೂಕ್ತ ಸಮಯ ಕೂಡ. ಮಾನಸಿಕ ಹಾಗೂ ಭೌತಿಕವಾಗಿ ನನಗೆ ಆಯಾಸವಾಗಿದೆ.

ಕಳೆದ ಒಂದು ವರ್ಷದಿಂದ ಹಾಗೂ ಅದಕ್ಕಿಂತ ಹೆಚ್ಚಾಗಿ ನನಗೆ ನೀಡಿದ ಭದ್ಧತೆಗಳನ್ನು ನಿರ್ವಹಿಸಲು ಪ್ರಯತ್ನಿಸಿದ್ದೇನೆ' ಎಂದು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿದ್ದು ನನ್ನ ಜೀವನದ ಅದ್ಭುತ ಕ್ಷಣ. ತಂಡಕ್ಕಾಗಿ ಇನ್ನಷ್ಟು ಉತ್ತಮವಾಗಿ ಆಟವಾಡಲು ಮುಂದಿನ ದಿನಗಳಲ್ಲಿಯೂ ಮುಂದುವರಿಸಿಕೊಂಡು ಹೋಗುತ್ತೇನೆ' ಎಂದು ಹೇಳಿದ್ದಾರೆ.

Scroll to load tweet…